ಇಸ್ರೋದಿಂದ ‘INSAT-3DS’ ಯಶಸ್ವಿ ಉಡಾವಣೆ.

ಶ್ರೀಹರಿಕೋಟಾ ,ಫೆಬ್ರವರಿ,17,2024(www.justkannada.in):  ಇತ್ತೀಚೆಗಷ್ಟೆ ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಉಡಾಯಿಸಿ ಸಾಧನೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೀಗ ಇನ್ಸಾಟ್ -3 ಡಿಎಸ್ ಹವಾಮಾನ ಉಪಗ್ರಹವನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರೋನಸ್ ಉಡಾವಣಾ ವಾಹನದಲ್ಲಿ ಇನ್ಸಾಟ್ -3 ಡಿಎಸ್ ಹವಾಮಾನ ಉಪಗ್ರಹವನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇನ್ಸಾಟ್ -3 ಡಿಎಸ್ ಉಪಗ್ರಹವು ಭೂಮಿಯ ಮೇಲ್ಮೈ ಮತ್ತು ಸಾಗರ ವೀಕ್ಷಣೆಗಳ ಅಧ್ಯಯನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

2,274 ಕೆಜಿ ತೂಕದ ಇನ್ಸಾಟ್ -3 ಡಿಎಸ್ ಉಪಗ್ರಹವು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೇರಿದಂತೆ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ವಿವಿಧ ಇಲಾಖೆಗಳಿಗೆ ಸೇವೆ ಸಲ್ಲಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Key words: Successful- launch – ‘INSAT-3DS’ – ISRO.