Friday, August 21, 2026

BDA Apartments

Home Front Page ರಾಜ್ಯ ಸರ್ಕಾರಕ್ಕೆ ‘ಜಾತಿಗಣತಿ ವರದಿ’ ಸಲ್ಲಿಕೆ: ಸಿಎಂ ಸಿದ್ದರಾಮಯ್ಯರಿಂದ ಸ್ವೀಕಾರ.

ರಾಜ್ಯ ಸರ್ಕಾರಕ್ಕೆ ‘ಜಾತಿಗಣತಿ ವರದಿ’ ಸಲ್ಲಿಕೆ: ಸಿಎಂ ಸಿದ್ದರಾಮಯ್ಯರಿಂದ ಸ್ವೀಕಾರ.

ಬೆಂಗಳೂರು,ಫೆಬ್ರವರಿ,29,2024(www.justkannada.in):  ಬಹುನಿರೀಕ್ಷಿತ ಜಾತಿಗಣತಿ ವರದಿಯನ್ನು ಇಂದು  ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಲ್ಲಿಕೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ಜಯ ಪ್ರಕಾಶ್ ಹೆಗ್ಡೆ,  ಜಾತಿಗಣತಿ ವರದಿಯನ್ನು ಸಲ್ಲಿಕೆ ಮಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಯಪ್ರಕಾಶ್ ನೀಡಿದ ಜಾತಿಗಣತಿ ವರದಿಯನ್ನು ಸ್ವೀಕರಿಸಿದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಸಲ್ಲಿಕೆ ಮಾಡಿದ್ದಾರೆ. ನಾನು ಸ್ವೀಕರಿಸಿದ್ದೇನೆ. ಸದನದಲ್ಲಿ ಮುಂದಿಟ್ಟು ವರದಿ ಬಗ್ಗೆ ಚರ್ಚಿಸಲಾಗುವುದು  ಎಂದು ತಿಳಿಸಿದರು.

Key words: Submission -‘Caste Census Report-State Government- Accepted -y CM Siddaramaiah