ಜಾತಿಗಣತಿ ವರದಿ ಬಿಡುಗಡೆ ಬಳಿಕ ಚರ್ಚೆ ಮಾಡುವುದು ಸೂಕ್ತ-ಸಚಿವ ಶಿವರಾಜ್ ತಂಗಡಗಿ.

ಬೆಂಗಳೂರು,ಫೆಬ್ರವರಿ,29,2024(www.justkannada.in):  ಬಹುನಿರೀಕ್ಷಿತ ಜಾತಿಗಣತಿ ವರದಿಯನ್ನ ಇಂದು  ಸಿಎಂ ಸಿದ್ದರಾಮಯ್ಯರಿಗೆ ರಾಜ್ಯ ಹಿಂದುಳಿದ ವರ್ಗಗಳ  ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಲ್ಲಿಕೆ ಮಾಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಸಂಸ್ಕೃತಿ ಇಲಖೆ ಸಚಿವ ಶಿವರಾಜ್ ತಂಗಡಗಿ, ಸಂತಸದಿಂದಲೇ ಜಾತಿ ಗಣತಿ ವರದಿ ಸ್ವೀಕಾರ ಮಾಡುತ್ತೇವೆ.  ಐತಿಹಾಸಿಕ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ವರದಿಯನ್ನ ಸ್ವೀಕಾರ ಮಾಡಲಿದ್ದಾರೆ.

ಜಾತಿ ಗಣತಿ ವರದಿ ನೋಡದೇ ವಿರೋಧ ಮಾಡುವುದು ಸರಿಯಲ್ಲ. ವರದಿ ಬಿಡುಗಡೆಯಾದ ಬಳಿಕ ಚರ್ಚೆ ಮಾಡುವುದು ಸೂಕ್ತ ಎಂದು ಶಿವರಾಜ್ ತಂಗಡಗಿ ತಿಳಿಸಿದರು.

Key words: After -release – caste census –report- discuss – Minister -Shivaraj Thangadagi.