ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ‘ಒನ್ ಕ್ಲಾಸ್, ಒನ್ ಟಿವಿ ಚಾನಲ್’ ಘೋಷಣೆ.

ನವದೆಹಲಿ ,ಫೆಬ್ರವರಿ,1,2022(www.justkannada.in):  ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು ವಿದ್ಯಾರ್ಥಿಗಳಿಗಾಗಿ  ಕೇಂದ್ರ ಬಜೆಟ್ ನಲ್ಲಿ ‘ಒನ್ ಕ್ಲಾಸ್, ಒನ್ ಟಿವಿ ಚಾನಲ್’ ಘೋಷಣೆ ಮಾಡಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಇಂದು 2022-23 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಕೊವೀಡ್ ಮಹಾಮಾರಿ  ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಭಾರಿ ಪರಿಣಾಮ ಬೀರಿದೆ ಹಿಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಇದುವರೆಗೆ ಕಡಿಮೆ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿದ್ದಂತ ಒನ್ ಕ್ಲಾಸ್, ಒನ್ ಟಿವಿ ಚಾನಲ್  ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗಿದೆ. ಈ ಚಾನಲ್ ಗಳನ್ನು 200ಕ್ಕೆ ಹೆಚ್ಚಿಸುತ್ತಿರೋದಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್  ಘೋಷಣೆ ಮಾಡಿದರು.

ಹಳ್ಳಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸದ ದೃಷ್ಠಿಯಿಂದ ಒನ್ ಕ್ಲಾಸ್, ಒನ್ ಟಿವಿ ಚಾನಲ್ ಆರಂಭಿಸಲಾಗಿದೆ. ಕೊರೋನಾ ಕಾರಣ ಮಕ್ಕಳು ಮನೆಯಲ್ಲಿಯೇ ಉಳಿದಿದ್ದಾರೆ. ಈ ಮಕ್ಕಳ ವಿದ್ಯಾಭ್ಯಾಸದ ದೃಷ್ಠಿಯಿಂದ ಚಾನಲ್ ಗಳ ಸಂಖ್ಯೆನ್ನು ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಇದು ದೇಶದ 1 ರಿಂದ 12ನೇ ತರಗತಿ ಮಕ್ಕಳಿಗೆ ಟಿವಿ ಚಾನಲ್ ಗಳ ಮೂಲಕ ವಿದ್ಯಾಬ್ಯಾಸದ ಕಲಿಕೆಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Key words: students-one class, one TV channel-budget

ENGLISH SUMMARY…

Good news for students: ‘One Class, One TV Channel’ announced
New Delhi, February 1, 2022 (www.justkannada.in): The Union Government has given good news to the students by announcing ‘One Class, One TV Channel,’ in the union budget.
Finance Minister Nirmala Seetharaman is presenting the 2022-23 budget today. In her budget speech, she announced that focus is given to the educational sector as the COVID-19 Pandemic has affected the students’ education largely.
The ‘One Class, One TV’ channel which was being telecast on very few channels will be extended to 200.
The One Class, One TV Channel is commenced in order to improve the education quality of the children in rural schools. “Children have remained at home due to the pandemic. The number of channels is increased to 200 under the Prime Minister’s E-Vidya program keeping in mind the interest of the children. This will be applicable for students studying from 1st standard to 12th standards,” she added.
Keywords: Union Budget/ Finance Minister/ Nirmala Seetharaman/ education/ one class one TV Channel