ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಆಹಾರ ಮತ್ತು ನಾಗರಿಗ ಸರಬರಾಜು ಸಚಿವ ಕೆ. ಗೋಪಾಲಯ್ಯರವರು

 

ಬೆಂಗಳೂರು, ಮೇ 06, 2020 : (www.justkannada.in news ) ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಚಿತ್ರರಂಗ ಸ್ಥಗಿತಗೊಂಡಿದ್ದು ನಟನೆಯನ್ನೆ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಅನೇಕ ದಿನಗೂಲಿ ಸಿನಿ ಕಾರ್ಮಿಕರ ಕುಟುಂಬಗಳ ಪರಿಸ್ಥಿತಿ ಸಂಕಷ್ಟದಲ್ಲಿದೆ. ಇದನ್ನು ಅರಿತು ಸಚಿವ ಕೆ ಗೋಪಾಲಯ್ಯ ಆಹಾರದ ಕಿಟ್ ವಿತರಿಸಿದರು.

ಚಾಮರಾಜಪೇಟೆ ಚಲನಚಿತ್ರ ಕಾರ್ಮಿಕರ ಸಂಘದಲ್ಲಿ ಬುಧವಾರ ಸಿನಿಮಾ ಕಾರ್ಮಿಕರಿಗೆ ಸಚಿವ ಕೆ ಗೋಪಾಲಯ್ಯರವರು ಆಹಾರದ ಕಿಟ್ ವಿತರಿಸಿದರು.

ಈ ವೇಳೆ ಮಂಡ್ಯ ಸಂಸದೆ ಸುಮಲತ ಅವರು ಮಾತನಾಡಿ, ಕಲಾವಿದರಿಗೆ ಕೊರೋನ ಲಾಕ್ ಡೌನ್ ಬಿಸಿ ತಟ್ಟಿರೋದು ನಿಜ. ಆದರೆ ಸರ್ಕಾರ ಮೊದಲಿನಿಂದಲೂ ನಮ್ಮ ಸಿನಿಮಾ ರಂಗಕ್ಕೆ ಸಹಾಯ ಮಾಡ್ತಿದೆ. ಅದರಂತೆ ಇಂದು ಸಚಿವ ಗೋಪಾಲಯ್ಯ ಅವರು ಸಿನಿಮಾ ಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನ ನೀಡುತ್ತಿದ್ದಾರೆ ಅವರಿಗೆ ಕೃತಜ್ಞತೆ ಹೇಳಿದರು.

bangalore-film-artists-gopalaiaha-food-kits-sumalatha-ambarish

ಸಚಿವ ಗೋಪಾಲಯ್ಯ ಮಾತನಾಡಿ, ಮಂಡ್ಯ ಸಂಸದೆ ಸುಮಲತ ಅಂಬರೀಶ್ ಅವರು ಮತ್ತು ಸಿನಿಮಾ ನಿರ್ದೇಶಕರಾದ ರಾಕ್ ಲೈನ್ ವೆಂಕಟೇಶ್ ಅವರು ಸಿನಿಮಾ ಕ್ಷೇತ್ರದವರ ಸಂಕಷ್ಟವನ್ನು ನನ್ನ ಗಮನಕ್ಕೆ ತಂದರು. ಅದರ ಪ್ರಕಾರ ಇವತ್ತು ಮುಖ್ಯಮಂತ್ರಿಗಳ ಸೂಚನೆಯಂತೆ 800 ಕುಟುಂಬಕ್ಕೆ ಆಹಾರ ಕಿಟ್ ಗಳನ್ನ ವಿತರಣೆ ಮಾಡಿರುವೆ ಎಂದರು.

ಇನ್ನು ಈ ಸಂದರ್ಭದಲ್ಲಿ ನಾನು ಅಂಬರೀಶ್ ಅಣ್ಣ ಅವರನ್ನ ನೆನಪಿಸಿಕೊಳ್ಳುತ್ತೀನಿ. ಅವರು ವಸತಿ ಸಚಿವರಾಗಿದ್ದಾಗ ನನ್ನನ್ನು ಕರೆದು ನಿನಗೆ ಏನು ಬೇಕು ಗೋಪಾಲಯ್ಯ ಅಂತ ಕೇಳಿದ್ರು. ಇವತ್ತು ಸುಮಲತ ಅಂಬರೀಶ್ ಅವರು ಮತ್ತು ರಾಕ್ ಲೈನ್ ವೆಂಕಟೇಶ್ ಕೇಳಿಕೊಂಡತ್ತೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ ಎಂದರು.

 

key words : bangalore-film-artists-gopalaiaha-food-kits-sumalatha-ambarish