ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಕಾಲೇಜಿಗೆ ಬಿಗಿ ಪೊಲೀಸ್ ಭದ್ರತೆ.

ಬೆಳಗಾವಿ,ಡಿಸೆಂಬರ್,1,2022(www.justkannada.in):  ಡ್ಯಾನ್ಸ್ ಮಾಡುವ ವೇಳೆ ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಸಹಪಾಠಿಗಳೇ  ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಇಂಟರ್ ಕಾಲೇಜು ಫೆಸ್ಟ್  ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ್ದು, ಈ ವೇಳೆ ಸಹಪಾಠಿಗಳೇ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಇಂದು ಕನ್ನಡ ಪರ ಸಂಘಟನೆ ಕಾಲೇಜಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ  ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗೋಗಟೆ ಕಾಲೇಜು ಆಡಳಿತ ಮಂಡಳಿ ಪಿಯುಸಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದ್ದಾರೆ.  ಕಾಲೇಜು ಮುಂಭಾಗದಲ್ಲಿ ಪೊಲೀಸ್  ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Key words: students – attacked – flying – Kannada flag-belagavi