ನೃತ್ಯಭ್ಯಾಸ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು….

ಕೋಲಾರ,ಜ,24,2020(www.justkannada.in):  ಶಾಲಾ ವಾರ್ಷಿಕೋತ್ಸವಕ್ಕಾಗಿ ನೃತ್ಯಭ್ಯಾಸ ಮಾಡುತ್ತಿದ್ದ ವೇಳೆಯೇ ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಟಿ. ಗೊಲ್ಲಹಳ್ಳಿ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹೃದಯ ಶಾಲೆ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪೂಜಿತಾ ಮೃತಪಟ್ಟ ವಿದ್ಯಾರ್ಥಿನಿ.  ಮೃತಪಟ್ಟ ಅಲ್ಲಿಕುಂಟೆ ಗ್ರಾಮದ ನಿವಾಸಿ,

ಶಾಲೆಯಲ್ಲಿ ನಾಳೆ ಶಾಲಾ ವಾರ್ಷಿಕೋತ್ಸವ ಹಿನ್ನೆಲೆ  ತನ್ನ ಸಹಪಾಠಿಗಳ ಜತೆ ವಿದ್ಯಾರ್ಥಿನಿ ಪೂಜಿತಾ ನೃತ್ಯಭ್ಯಾಸ ಮಾಡುತ್ತಿದ್ದಳು. ಈ ವೇಳೆ ಅಲ್ಲೇ ಕುಸಿದು ಬಿದ್ದಿದ್ದಾಳೆ.  ನಂತರ ಆಕೆಯನ್ನ ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

ಇನ್ನು ವಿದ್ಯಾರ್ಥಿನಿ ಕುಸಿದು ಬಿದ್ದರೂ ಸ್ಥಳದಲ್ಲಿಯೇ ಇದ್ದ ಶಿಕ್ಷಕ ನೆರವಿಗೆ ಬರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿ ಪೂಜಿತಾ ಕುಸಿದ ವೇಳೆ ಸ್ಥಳದಲ್ಲೇ ಇದ್ದ ಶಿಕ್ಷಕ ಪ್ರಾಥಮಿಕ ಚಿಕಿತ್ಸೆಗೆ ಮುಂದಾಗಲಿಲ್ಲ ಎನ್ನಲಾಗುತ್ತಿದೆ.

Key words: Student -dies  -falling – dancing-kolar