ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಕೇಸ್ : ಜ.27ಕ್ಕೆ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್….

ಮೈಸೂರು,ಜ,24,2020(www.justkannada.in): ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜನವರಿ 27ಕ್ಕೆ ಜಾಮೀನು ಅರ್ಜಿ ತೀರ್ಪುನ್ನ ಕಾಯ್ದಿರಿಸಿದೆ.

ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ  ನಳಿನಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಲಯದಲ್ಲಿ ನಡೆಯಿತು. ಸತತ ಎರಡು ಗಂಟೆಗಳ ಕಾಲ ವಾದ ಪ್ರತಿವಾದ‌  ನಡೆಯಿತು.

ನಳಿನಿ ಪರ ಹಿರಿಯ ವಕೀಲ ದ್ವಾರಕನಾಥ್ ಟೀಂ ವಾದ ಮಂಡಿಸಿದೆ. ವಾದ ಪ್ರತಿವಾದ ಆಲಿಸಿದ ಕೋರ್ಟ್ ಜಾಮೀನು ಅರ್ಜಿ ತೀರ್ಪನ್ನ ಜ.27ಕ್ಕೆ ಕಾಯ್ದಿರಿಸಿದೆ.

Key words: Free Kashmir –play card-Case-mysore Court – bail application – Judgment-Jan. 27