ರಾಜ್ಯಕ್ಕೆ  2 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಿದೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

ಬೆಂಗಳೂರು,ಮೇ,19,2021(www.justkannada.in): ರಾಜ್ಯಕ್ಕೆ 2 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk

ಈ ಕುರಿತು ಮಾಹಿತಿ ನೀಡಿದ ಸಚಿವ ಸುದಾಕರ್, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ಅಗತ್ಯವಿದೆ. ಈಗಾಗಲೇ 2 ಲಕ್ಷ ಡೋಸ್ ಲಸಿಕೆ ಬಂದಿದೆ. ಮತ್ತೆ 2 ಕೋಟಿ ಡೋಸ್ ಗೆ ಆರ್ಡರ್ ಮಾಡಿದ್ದೇವೆ. ಮೊದಲ ಡೋಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.state-received-2-lakh-doses-covaccine-minister-dr-k-sudhakar

ರಾಜ್ಯದಲ್ಲೇ ಕೊವ್ಯಾಕ್ಸಿನ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಸ್ಪುಟ್ನಿಕ್ ಲಸಿಕೆ ಉತ್ಪಾದನೆಯನ್ನ ಮಾಡಲಾಗುತ್ತದೆ. ರಾಜ್ಯಕ್ಕೆ ಆದಷ್ಟು ಬೇಗ ಲಸಿಕೆ ಸಿಗುವ ವಿಶ್ವಾಸವಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: state – received 2 lakh -doses -covaccine -Minister – Dr. K. Sudhakar.