ಲಾಕ್ ಡೌನ್ ವಿಸ್ತರಣೆ, ಪ್ಯಾಕೇಜ್ ಕುರಿತು ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ- ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಮೇ,19,2021(www.justkannada.in):  ಕೊರೋನಾ ಮಹಾಮಾರಿ ಹರಡುವಿಕೆಯನ್ನ ತಡೆಯಲು ಜಾರಿಗೊಳಿಸಲಾಗಿರುವ  ಲಾಕ್ ಡೌನ್ ವಿಸ್ತರಣೆ ಮತ್ತು ಬಡವರಿಗೆ ವಿಶೇಷ ಪ್ಯಾಕೇಜ್ ಗೆ  ಆಗ್ರಹ ಹೆಚ್ಚಾಗಿದ್ದು ಈ ಕುರಿತು ಇಂದು ಸಿಎಂ ಬಿಎಸ್ ಯಡಿಯೂರಪ್ಪ  ನಿರ್ಧಾರ ಕೈಗೊಳ್ಳಲಿದ್ದಾರೆ.jk

ಈ ಬಗ್ಗೆ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಕರೆದಿರುವ ಹಿರಿಯ ಸಚಿವರ ಸಭೆ ಪ್ರಾರಂಭವಾಗಿದೆ. ಸಭೆಗೂ ಮುನ್ನ ಮಾತನಾಡಿರುವ ಡಿಸಿಎಂ ಅಶ್ವತ್ ನಾರಾಯಣ್, ಕೊರೋನಾ ನಿರ್ವಹಣೆ ಬಗ್ಗೆ ಚರ್ಚಿಸಲು ಸಿಎಂ ಸಭೆ ಕರೆದಿದ್ದಾರೆ. ಲಾಕ್ ಡೌನ್ ವಿಸ್ತರಣೆ, ಪ್ಯಾಕೇಜ್ ಬಗ್ಗೆ ಸಲಹೆ ಬಂದಿದೆ. ಎಲ್ಲದರ ಬಗ್ಗೆ ಚರ್ಚಿಸಿ ಸಿಎಂ ಬಿಎಸ್ ವೈ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.lockdown-extension-package-discuss-meeting-dcm-ashwath-narayan

ಹಾಗೆಯೇ ಸರ್ಕಾರ ಯಾವುದೇ ಅಂಕಿ ಅಂಶಗಳನ್ನ ಮುಚ್ಚಿಟ್ಟಿಲ್ಲ. ಸಿಎಂ ಬಿಎಸ್ ವೈ ಸುದ್ಧಿಗೋಷ್ಠಿ ನಡೆಸಿ ಎಲ್ಲವನ್ನೂ ಘೋಷಣೆ ಮಾಡಲಿದ್ದಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

Key words: Lockdown extension- package -Discuss – meeting-DCM- Ashwath Narayan.