ಮೈಸೂರು ಸಮತಾ ಅಧ್ಯಯನ ಕೇಂದ್ರದಿಂದ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯೋಜನೆ.

ಮೈಸೂರು,ಜನವರಿ,31,2023(www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ-2023 ಯನ್ನು ಆಯೋಜಿಸಿದೆ.

ಸ್ಪರ್ಧೆಯ ನಿಯಮಗಳು: ಮಹಿಳಾ ಕೇಂದ್ರಿತ ವಸ್ತು ವಿಷಯವನ್ನು ನಿಗದಿಪಡಿಸಲಾಗಿದೆ. ಕವನ ಸ್ಪರ್ಧೆ ಗೆ ಎರಡು ಕವನ. ಕಥಾ ಸ್ಪರ್ಧೆ ಗೆ ಒಂದು ಕಥೆ. ಈ ಮೊದಲು ಎಲ್ಲಿಯೂ ಪ್ರಸಾರ/ ಪ್ರಕಟ ಆಗಿರಬಾರದು. ಕಥೆಗೆ ಗರಿಷ್ಠ ಪದಮಿತಿ 2500 ಪದಗಳು. ವಯಸ್ಸಿನ ಗರಿಷ್ಠ ಮಿತಿ 26.

ಕಥೆ, ಕವನವನ್ನು ಹಾಳೆಯ ಒಂದು ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದು ಅಥವಾ ನುಡಿ/ಬರಹ/ಯುನಿಕೋಡ್ ನಲ್ಲಿ  ಟೈಪ್ ಮಾಡಿರಬೇಕು. ಹೆಸರು ,ವಿಳಾಸ,ಫೋನ್ ಸಂಖ್ಯೆ ಮತ್ತು ಈ -ಮೇಲ್ ವಿವರವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು, ತಮ್ಮ ಕಾಲೇಜು/ ವಿಶ್ವವಿದ್ಯಾನಿಲಯದ ಮುಖ್ಯಸ್ಥರಿಂದ ದೃಢೀಕರಿಸಿ ಕಳುಹಿಸಬೇಕು. ಕೊನೆಯ ದಿನಾಂಕ: 28.02.2023.

ಬಹುಮಾನ ಮೊತ್ತ:

ಪ್ರಥಮ ರೂ. 5 ಸಾವಿರ , ದ್ವಿತೀಯ  ರೂ. 3 ಸಾವಿರ, ತೃತೀಯ 2 ಸಾವಿರ ರೂ. ಮತ್ತು ತೀರ್ಪುಗಾರರು ಮೆಚ್ಚಿದ ಹತ್ತು ಕತೆಗಳಿಗೆ ತಲಾ 1 ಸಾವಿರ ರೂ.ಗಳ ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು. ಅಲ್ಲದೆ, ವಿಜೇತರು ಮತ್ತು ಪ್ರೋತ್ಸಾಹಕರ ಬಹುಮಾನ ಪಡೆದವರಿಗೆ ಮೇ ತಿಂಗಳ ಕೊನೆಯ ವಾರದಲ್ಲಿ ಒಂದು ದಿನದ ಕಾವ್ಯ ಮತ್ತು ಕಥಾ ಕಮ್ಮಟ ನಡೆಸಲಾಗುವುದು.

ಕವನ/ಕಥೆ ಕಳಿಸಬೇಕಾದ ವಿಳಾಸ:

ವಿಜಯಾ ರಾವ್,

ಮನೆ ನಂಬರ್ 861, 14ನೇ ಮೇನ್, ವಿಜಯನಗರ ಮೊದಲನೆ ಹಂತ, ಮೈಸೂರು. ಪಿನ್: 570017.ಈ -ಮೇಲ್: samathaadhyayanakendra2023@gmail.com

Key words: State- Level -Poetry – Story -Competition- Mysore- Samata- Study -Centre.