Sunday, August 2, 2026

BDA Apartments

Home Front Page ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಹಾಡಿ ಹೊಗಳಿದ ಸಚಿವ ನಾರಾಯಣಗೌಡ.

ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಹಾಡಿ ಹೊಗಳಿದ ಸಚಿವ ನಾರಾಯಣಗೌಡ.

ಮಂಡ್ಯ,ಜನವರಿ,31,2023(www.justkannada.in): ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಟೀಕೆ ಟಿಪ್ಪಣಿ  ಆದರೆ ಸಚಿವ ನಾರಾಯಣಗೌಡ ಅವರು ಮಾತ್ರ ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಹಾಡಿ ಹೊಗಳಿದ್ದಾರೆ.

ಹೌದು ಕೆ.ಆರ್ ಪೇಟೆ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಮಾತನಾಡಿರುವ ಸಚಿವ ನಾರಾಯಣಗೌಡ , ಕೆ.ಆರ್ ಪೇಟೆಗೆ ಸಿದ್ಧರಾಮಯ್ಯ ಹಲವರು ಕೊಡಗೆ ನೀಡಿದ್ದಾರೆ. ಸಿದ್ಧರಾಮಯ್ಯ ಬಗ್ಗೆ ನನಗೆ ಗೌರವವಿದೆ. ಕೆ.ಆರ್ ಪೇಟೆ ತಾಲ್ಲೂಕಿಗೆ ಮೊರಾರ್ಜಿ ವಸತಿ ಶಾಲೆಗಳನ್ನ ನೀಡಿದ್ದಾರೆ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ 40 ಕೋಟಿ ಅನುದಾನ ನೀಡಿದ್ದರು. ಸಿದ್ಧರಾಮಯ್ಯ ಬಗ್ಗೆ ಗೌರವವಿದೆ ಅವರ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ ಎಂದು ಗುಣಗಾನ ಮಾಡಿದ್ದಾರೆ.

Key words: Minister- Narayana Gowda –praised- former CM -Siddaramaiah.