Saturday, August 15, 2026

BDA Apartments

Home Front Page ಬೆಂಗಳೂರಲ್ಲಿ ಸ್ವಂತ ಸೂರಿನ ಕನಸು ಕಾಣುತ್ತಿದ್ದವರಿಗೆ ಸಿಹಿ ಸುದ್ದಿ ನೀಡಿ ರಾಜ್ಯ ಸರಕಾರ

ಬೆಂಗಳೂರಲ್ಲಿ ಸ್ವಂತ ಸೂರಿನ ಕನಸು ಕಾಣುತ್ತಿದ್ದವರಿಗೆ ಸಿಹಿ ಸುದ್ದಿ ನೀಡಿ ರಾಜ್ಯ ಸರಕಾರ

ರಾಜ್ಯ ಸರಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಒಂಟಿ ಮನೆ ಯೋಜನೆ ಆರಂಭಿಸಲಾಗುತ್ತಿದೆ.

ರಾಜ್ಯ ಸರ್ಕಾರವು ಬೆಂಗಳೂರಿನ ಜನತೆಗೆ ಸಿಹಿಸುದ್ದಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಒಂಟಿ ಮನೆ ಯೋಜನೆ ಆರಂಭಿಸುತ್ತಿದೆ.

ಇದಕ್ಕಾಗಿ ಶೀಘ್ರದಲ್ಲಿ ಅರ್ಜಿ ಆಹ್ವಾನಿಸಿ ನಗರದ 2 ಸಾವಿರ ಮಂದಿಗೆ ತಲಾ 5 ಲಕ್ಷ ರೂ.  ಧನಸಹಾಯ ನೀಡಲಾಗುವುದು ಎಂದು ವಿಶೇಷ ಆಯುಕ್ತ ಡಾ.ರಾಮ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒಂಟಿ ಮನೆ ಯೋಜನೆಗೆ ಮತ್ತೆ ಚಾಲನೆ ನೀಡುವಂತೆ ಸೂಚಿಸಿದೆ.ಯೋಜನೆಗೆ 100 ಕೋಟಿ ರೂ. ಮೀಸಲಿಡಲಾಗಿದ್ದು, 2 ಸಾವಿರ ಫಲಾನುಭವಿಗಳಿಗೆ ತಲಾ 5 ಲಕ್ಷ ರೂ.ನಂತೆ ಧನಸಹಾಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.