Thursday, October 22, 2026

Dasara Wishes

Happy Dasara
Home Front Page ರಾಜ್ಯ ಬಜೆಟ್: ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್.

ರಾಜ್ಯ ಬಜೆಟ್: ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್.

ಬೆಂಗಳೂರು,ಫೆಬ್ರವರಿ,16,2024(www.justkannada.in): ಮ‍ದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಲಿದ್ದು ಬಿಯರ್ ಸೇರಿ ಎಲ್ಲಾ ಬ್ರಾಂಡ್ ಗಳ ಬೆಲೆ ಏರಿಸುವುದಾಗಿ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಮದ್ಯದ ಘೋಷಿತ ಸ್ಲಾಬ್‌ ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML, ಬಿಯರ್‌ ಸ್ಲಾಬ್‌ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದ್ದಾರೆ.ರಾಜ್ಯ ಬಜೆಟ್: ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ drink

ಬಿಯರ್ ಸೇರಿ ಎಲ್ಲಾ ಬ್ರಾಂಡ್ ಗಳ ಬೆಲೆ ಹೆಚ್ಚಳ ಮಾಡಲಾಗುವುದು.  ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: State budget-Another -shock – liquor drinkers.