ಸಿಎಂ ಬಿಎಸ್ ಯಡಿಯೂರಪ್ಪರಿಂದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ…

ಬೆಂಗಳೂರು,ಜನವರಿ,2,2021(www.justkannada.in): ಇಂದು ಸಂಜೆ ಬಹುನಿರೀಕ್ಷಿತ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಶಿವಮೊಗ್ಗದಲ್ಲಿ ನಡೆಯಲಿದ್ದು,  ಈ ಹಿನ್ನೆಲೆ ರಾಜ್ಯಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.jk-logo-justkannada-mysore

ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಹಿನ್ನೆಲೆ ಅರುಣ್ ಸಿಂಗ್ ಅವರ ಜತೆ ಶಿವಮೊಗ್ಗಕ್ಕೆ ತೆರಳುತ್ತೇನೆ. ಸಚಿವ ಸಂಪುಟ ವಿಸ್ತರಣೆ ಕುರಿತು ಅವರ ಜತೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.state- bjp-in charge –arun singh- tomorrow-CM BS Yeddyurappa.

ಇನ್ನು ಇತ್ತ  ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಉಸ್ತುವಾರಿಯವರ ಜೊತೆ ಚರ್ಚೆ ನಡೆಸಲೇಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಆಕಾಂಕ್ಷಿಗಳು ಒತ್ತಡ ಹಾಕಿದ್ದಾರೆ. ಹೀಗಾಗಿ ಅರುಣ್ ಸಿಂಗ್ ಹಾಗೂ ಸಿಎಂ ಬಿಎಸ್ ವೈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

Key words: State- BJP -in-charge- Arun Singh -meets -CM BS Yeddyurappa

ENGLISH SUMMARY

CM BSY visits State BJP In-charge Arun Singh
Bengaluru, Jan. 02, 2021 (www.justkannada.in): The much expected State BJP Core Committee meeting will be held at Shivamogga this evening. State BJP In-charge Arun Singh has arrived in Karnataka, triggering speculations about the possibilities of discussion on cabinet expansion or reshuffle.
Chief Minister B.S. Yedyurappa met Arun Singh at the Kumarakrupa guest house in Bengaluru once. Speaking to the press persons before this the Chief Minister said that he was accompanying BJP State In-charge Arun Singh to Shivamogga following the State BJP Core Committee meeting. “I will speak to him about the cabinet expansion,” he said.
Keywords: BJP State In-charge Arun Singh/ CM B.S. Yedyurappa/ cabinet expansion/ reshuffle.