ಅಧಿವೇಶನ ಇದೆ ಪ್ರವಾಸ ಮುಂದೂಡಿ ಎಂದು ಅಮಿತ್ ಶಾಗೆ ಹೇಳಲು ರಾಜ್ಯ ಬಿಜೆಪಿಗೆ ಧೈರ್ಯ ಇಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ.

ಬೆಳಗಾವಿ,ಡಿಸೆಂಬರ್,29,2022(www.justkannada.in): ಒಂದು ದಿನ ಮೊದಲೇ ಬೆಳಗಾವಿ ಚಳಿಗಾಲದ ಅಧಿವೇಶನ ಮೊಟಕಗೊಳಿಸುತ್ತಿರುವ ಸರ್ಕಾರದ ನಡೆಯನ್ನ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯಕ್ಕೆ ಅಮಿತ್ ಶಾ  ಬರುತ್ತಿದ್ದಾರೆ ಅಂತಾ ಇಂದೇ ಅಧಿವೇಶನ ಮೊಟಕು ಮಾಡುತ್ತಿದ್ದಾರೆ. ಅಧಿವೇಶನ ಇದೆ ಪ್ರವಾಸ ಮುಂದೂಡಿ ಎಂದು ಅಮಿತ್ ಶಾಗೆ ಹೇಳಲು ರಾಜ್ಯ ಬಿಜೆಪಿನಾಯಕರಿಗೆ ಧೈರ್ಯವಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ಬರೀ ಉತ್ತರ ಕರ್ನಾಟಕ ಮಾತ್ರವಲ್ಲ ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು.  ಆದರೆ ಯಾವುದೇ ಚರ್ಚೆಗಳು ನಡೆದಿಲ್ಲ. ಇನ್ನೂ ಒಂದು ವಾರ ಅಧಿವೇಶನ ನಡೆಸಿದರೇ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬಹುದು.  ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿಯವರು  ಬಹಳ ಮಾತನಾಡುತ್ತಾರೆ. ಕೇವಲ ತೋರಿಕೆಗಾಗಿ ಮಾತನಾಡಬಾರದು. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲಿ. ಕೇವಲ ಭಾಷಣ ಮಾಡಿದರೇ ಸಾಕಾಗುವುದಿಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.

ನಾವು ವಿಜಯಪುರದಲ್ಲಿ ಸಮಾವೇಶ ಮಾಡುತ್ತೇವೆ. ಮೂರು ವರ್ಷದಿಂದ ಸರ್ಕಾರ ಏನು ಮಾಡಿದೆ ಎಂಬುದನ್ನು ಸಮಾವೇಶದಲ್ಲಿ ಹೇಳುತ್ತೇವೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words:  state -BJP – Amit Shah – session – postpone-former CM- Siddaramaiah.