ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ: ಕಾಂಗ್ರೆಸ್ ಮುನ್ನಡೆ : ಹಲವು ಹಾಲಿ ಸಚಿವರಿಗೆ ಹಿನ್ನಡೆ.

ಬೆಂಗಳೂರು,ಮೇ,13,2023(www.justkannada.in): ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹಿರ ಬೀಳುತ್ತಿದ್ದು ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್ 79 ಕ್ಷೇತ್ರಗಳಲ್ಲಿ,  ಬಿಜೆಪಿ 66 ಕ್ಷೇತ್ರಗಳಲ್ಲಿ,  ಜೆಡಿಎಸ್ 21 ಕ್ಷೇತ್ರಗಳಲ್ಲಿ,  ಇತರೇ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಹಲವು ಹಾಲಿ ಸಚಿವರು ಹಿನ್ನಡೆ ಅನುಭವಿಸಿದ್ದಾರೆ. ಸಚಿವರಾದ ಡಾ.ಕೆ.ಸುಧಾಕರ್,  ಸಿ. ಸಿ ಪಾಟೀಲ್.  ನಾರಾಯಣಗೌಡ, ಬಿಸಿ ನಾಗೇಶ್, ವಿ. ಸೋಮಣ್ಣ, ಶ್ರೀರಾಮುಲು ಬಿ. ಸಿ ಪಾಟೀಲ್, ಎಂಟಿಬಿ ನಾಗರಾಜ್, ಗೋವಿಂದ ಕಾರಜೋಳ ಹಿನ್ನೆಡೆ ಅನುಭವಿಸಿದ್ದಾರೆ.

ಹಾಗೆಯೇ ಕನಕಪುರದಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ 3 ಸಾವಿರ ಮತಗಳ ಅಂತರದಿಂದ ಮುನ್ನಡೆ. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗೆ ಮುನ್ನಡೆ.  ಜೆಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಿನ್ನೆಡೆ ಅನುಭವಿಸಿದ್ದಾರೆ.

Key words: State Assembly -Election -Vote Counting- Congress -Lead