ಮತ ಎಣಿಕೆ ಕಾರ್ಯ ಚುರುಕು: ಹೀಗಿದೆ ನೋಡಿ ಆರಂಭಿಕ ಟ್ರೆಂಡ್ !

ಬೆಂಗಳೂರು, ಮೇ 13, 2023 (www.justkannada.in): ರಾಜ್ಯದೆಲ್ಲೆಡೆ ಮತ ಎಣಿಕೆ ಕಾರ್ಯ ಚುರುಕುಗೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ, ಹೊನ್ನಾಳಿಯಲ್ಲಿ ಎಂ.ಪಿ. ರೇಣುಕಾಚಾರ್ಯ, ಹೊಳೆನರಸೀಪುರದಲ್ಲಿ ರೇವಣ್ಣ ಹಿನ್ನಡೆ ಸಾಧಿಸಿದ್ದಾರೆ.

ಆರಂಭಿಕ ಟ್ರೆಂಡ್ ಹೀಗಿದೆ. 44ರಲ್ಲಿ ಬಿಜೆಪಿ, 37ರಲ್ಲಿ ಕಾಂಗ್ರೆಸ್, ಜೆಡಿಎಸ್ 17ರಲ್ಲಿ ಮುನ್ನಡೆ ಸಾಧಿಸಿವೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಚನ್ನಪಟ್ಟಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಹಾಸನದಲ್ಲಿ ಪ್ರೀತಂ ಗೌಡ ಮತ್ತೆ ಹಿನ್ನಡೆ ಅನುಭವಿಸಿದ್ದಾರೆ.

ಚಾಮರಾಜಪೇಟೆಯಲ್ಲಿ ಜಮೀರ್‌ ಅಹಮದ್, ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ ಅರವಿಂದ ಬೆಲ್ಲದ್, ಕೋಲಾರದಲ್ಲಿ ವರ್ತೂರು ಪ್ರಕಾಶ್ ಮುನ್ನಡೆ ಸಾಧಿಸಿದ್ದಾರೆ.

ಅಂಚೆ ಮತ ಎಣಿಕೆಯಲ್ಲಿ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಪಾಲಯ್ಯ, ಮಲ್ಲೇಶ್ವರದಲ್ಲಿ ಅಶ್ವತ್ಥ ನಾರಾಯಣ, ಹಾಸನದಲ್ಲಿ ಜೆಡಿಎಸ್‌ನ ಸ್ವರೂಪ್ ಮುನ್ನಡೆ ಸಾಧಿಸಿದ್ದಾರೆ.