Monday, September 21, 2026

BDA Apartments

ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ: ಕಾಂಗ್ರೆಸ್ ಮುನ್ನಡೆ : ಹಲವು ಹಾಲಿ ಸಚಿವ...
Home Front Page ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ: ಕಾಂಗ್ರೆಸ್ ಮುನ್ನಡೆ : ಹಲವು ಹಾಲಿ ಸಚಿವರಿಗೆ ಹಿನ್ನಡೆ.

ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ: ಕಾಂಗ್ರೆಸ್ ಮುನ್ನಡೆ : ಹಲವು ಹಾಲಿ ಸಚಿವರಿಗೆ ಹಿನ್ನಡೆ.

ಬೆಂಗಳೂರು,ಮೇ,13,2023(www.justkannada.in): ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹಿರ ಬೀಳುತ್ತಿದ್ದು ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್ 79 ಕ್ಷೇತ್ರಗಳಲ್ಲಿ,  ಬಿಜೆಪಿ 66 ಕ್ಷೇತ್ರಗಳಲ್ಲಿ,  ಜೆಡಿಎಸ್ 21 ಕ್ಷೇತ್ರಗಳಲ್ಲಿ,  ಇತರೇ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಹಲವು ಹಾಲಿ ಸಚಿವರು ಹಿನ್ನಡೆ ಅನುಭವಿಸಿದ್ದಾರೆ. ಸಚಿವರಾದ ಡಾ.ಕೆ.ಸುಧಾಕರ್,  ಸಿ. ಸಿ ಪಾಟೀಲ್.  ನಾರಾಯಣಗೌಡ, ಬಿಸಿ ನಾಗೇಶ್, ವಿ. ಸೋಮಣ್ಣ, ಶ್ರೀರಾಮುಲು ಬಿ. ಸಿ ಪಾಟೀಲ್, ಎಂಟಿಬಿ ನಾಗರಾಜ್, ಗೋವಿಂದ ಕಾರಜೋಳ ಹಿನ್ನೆಡೆ ಅನುಭವಿಸಿದ್ದಾರೆ.ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ congress-bjp-jds congress bjp jds

ಹಾಗೆಯೇ ಕನಕಪುರದಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ 3 ಸಾವಿರ ಮತಗಳ ಅಂತರದಿಂದ ಮುನ್ನಡೆ. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗೆ ಮುನ್ನಡೆ.  ಜೆಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಿನ್ನೆಡೆ ಅನುಭವಿಸಿದ್ದಾರೆ.

Key words: State Assembly -Election -Vote Counting- Congress -Lead