Sunday, August 23, 2026

BDA Apartments

Home Cinema ಕನ್ನಡದಲ್ಲಿ ‘ರಾಮಾಯಣ’ ಪ್ರಸಾರಕ್ಕೆ ಸ್ಟಾರ್ ಸುವರ್ಣ ತಯಾರಿ !

ಕನ್ನಡದಲ್ಲಿ ‘ರಾಮಾಯಣ’ ಪ್ರಸಾರಕ್ಕೆ ಸ್ಟಾರ್ ಸುವರ್ಣ ತಯಾರಿ !

ಬೆಂಗಳೂರು, ಜೂನ್ 11, 2020 (www.justkannada.in): ಸ್ಟಾರ್ ಸುವರ್ಣ ವಾಹಿನಿ ಸದ್ಯದಲ್ಲಿಯೇ ರಾಮಾಯಣ ಡಬ್ಬಿಂಗ್ ಅವತರಣಿಕೆ ತೆರೆಗೆ ತರಲು ಸಿದ್ಧತೆ ನಡೆಸಿದೆ.

ಹಲವು ಡಬ್ಬಿಂಗ್ ಧಾರವಾಹಿಗಳನ್ನು ತೆರೆಗೆ ತರುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಮತ್ತೊಂದು ಧಾರವಾಹಿಯನ್ನು ಪ್ರಸಾರ ಮಾಡಲು ತಯಾರಿ ನಡೆಸುತ್ತಿದೆ.

ದೂರದರ್ಶನದಲ್ಲಿ ಹಳೆಯ ಕಾಲದಲ್ಲಿ ಪ್ರಸಾರವಾಗಿ, ಈಗ ಮತ್ತೆ ಮರುಪ್ರಸಾರವಾದಾಗಲೂ ಟಿಆರ್ ಪಿ ಏರಿಸಿಕೊಂಡಿದ್ದ ರಮಾನಂದ ಸಾಗರ್ ಅವರ ‘ರಾಮಾಯಣ’ ಧಾರವಾಹಿ ಈಗ ಕನ್ನಡದಲ್ಲಿ ಬರಲಿದೆ. ಶೀಘ್ರದಲ್ಲಿಯೇ ದಿನಾಂಕ ಘೋಷಿಸುವುದಾಗಿ ಚಾನೆಲ್ ಹೇಳಿದೆ.