‘ತಲೈವಿ’ ಡಿಜಿಟಲ್ ಹಕ್ಕು 55 ಕೋಟಿ ರೂ.ಗೆ ಮಾರಾಟ

ಬೆಂಗಳೂರು, ಜೂನ್ 11, 2020 (www.justkannada.in): ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಜೀವನದ ಬಗ್ಗೆ ಸಿನಿಮಾ ‘ತಲೈವಿ’ ಡಿಜಿಟಲ್ ಹಕ್ಕುಗಳು 55 ಕೋಟಿಗೆ ಮಾರಾಟವಾಗಿದೆಯಂತೆ.

ಜಯಲಲಿತಾ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ರೆ, ಎಂ.ಜಿ.ರಾಮಚಂದ್ರನ್‌ ಅವರ ಪಾತ್ರಕ್ಕೆ ನಟ ಅರವಿಂದ್‌ ಸ್ವಾಮಿ ಜೀವ ತುಂಬಿದ್ದಾರೆ. ಚಿತ್ರದ ಹಿಂದಿ ಅವತರಣಿಕೆಯ ಹಕ್ಕುಗಳು ನೆಟ್‌ಫ್ಲಿಕ್ಸ್‌ಗೆ ಮಾರಾಟವಾಗಿದೆ.

ಇನ್ನು ತಮಿಳು ಅವತರಣಿಕೆಯ ಹಕ್ಕುಗಳು ಅಮೆಜಾನ್‌ ಪ್ರೈಮ್‌ಗೆ ಮಾರಾಟಗೊಂಡಿದೆ.’ತಲೈವಿ’ ಚಿತ್ರವನ್ನು ನಿರ್ದೇಶಕ ವಿಜಯ್‌ ಮತ್ತು ನಿರ್ಮಾಪಕರು ಥಿಯೇಟರ್‌ ಮೂಲಕವೇ ಬಿಡುಗಡೆಗೆ ನಿರ್ಧರಿಸಿದ್ದಾರೆ.

ಜೂನ್‌ ತಿಂಗಳಲ್ಲಿ ರಿಲೀಸ್ ಆಗಬೇಕಿದ್ದ ಚಿತ್ರ ಕೊರೊನಾ ಭೀತಿ ಹಿನ್ನೆಲೆ ಮುಂದೂಡಲಾಗಿದೆ. ಇದೇ ವರ್ಷ ತಲೈವಿ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.