Monday, October 12, 2026

Dasara Wishes

ವಿಶ್ವದರ್ಜೆಯ ಫಿಲ್ಮ್ ಸಿಟಿ ಮೈಸೂರಿನಲ್ಲಿ ನಿರ್ಮಿಸುತ್ತೇವೆ: ಸಿ.ಎಂ ಘೋಷಣೆ Das...
Happy Dasara
Home Front Page ಗ್ಯಾರಂಟಿ ನಿಲ್ಲಿಸಲು ವೇದಿಕೆ ಸಿದ್ಧ: ಕಾಂಗ್ರೆಸ್ ನಿಜಬಣ್ಣ ಬಯಲು- ಕೇಂದ್ರ ಸಚಿವ ಹೆಚ್.ಡಿಕೆ ವಾಗ್ದಾಳಿ

ಗ್ಯಾರಂಟಿ ನಿಲ್ಲಿಸಲು ವೇದಿಕೆ ಸಿದ್ಧ: ಕಾಂಗ್ರೆಸ್ ನಿಜಬಣ್ಣ ಬಯಲು- ಕೇಂದ್ರ ಸಚಿವ ಹೆಚ್.ಡಿಕೆ ವಾಗ್ದಾಳಿ

ಚನ್ನಪಟ್ಟಣ, ಅಕ್ಟೋಬರ್,31,2024 (www.justkannada.in): ಗ್ಯಾರಂಟಿ ಯೋಜನೆ ನಿಲ್ಲಿಸಲು ವೇದಿಕೆ ಸಿದ‍್ಧವಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ನಿಜಬಣ್ಣ ಬಯಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಶಕ್ತಿಯೋಜನೆ ಮರುಪರಿಶೀಲನೆ ಕುರಿತು ಮಾತನಾಡಿದ  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಗ್ಯಾರಂಟಿ ನಿಲ್ಲಿಸುವ ಮೊದಲನೇ ಹಂತ ಇದು. ಗ್ಯಾರಂಟಿ ನಿಲ್ಲಿಸಲು ವೇದಿಕೆ ಸಿದ್ದವಾಗುತ್ತಿದೆ ಗ್ಯಾರಂಟಿಗೆ ಹಣದ ಕೊರತೆ ಇಲ್ಲ ಎಂದಿದ್ದರು. ಈಗ ಗ್ಯಾರಂಟಿ ಪರಿಷ್ಕರಣೆ ಅಂತಿದ್ದಾರೆ .ಒಂದೊಂದಾಗೆ ಗ್ಯಾರಂಟಿ ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ ಎಂದು ಕಿಡಿಕಾರಿದರು.

ಡಿಸಿಎಂ ಅವರಿಗೆ ಕನಸಿನಲ್ಲಿ ಬಂದು ಮಹಿಳೆಯರು ಹೇಳಿದ್ದಾರೋ ಅಥವಾ ದೇವರೇ ಬಂದು ಜ್ಞಾನೋದಯ ಮಾಡಿದೆಯೋ ?  ಟ್ವೀಟ್ ಮೂಲಕ ಮಹಿಳೆಯರು ಹೇಳಿದ್ದಾರೆ ಅಂತಾರೆ. ಈವಾಗ ಅವರಿಗೆ ಜ್ಞಾನೋದಯವಾಯಿತಾ.  ಒಂದೊಂದೇ ಗ್ಯಾರಂಟಿ ಮರೆಯಾಗಲು ಇದೊಂದು ಕಾರಣ. ಈಗಾಗಲೇ 20 ಲಕ್ಷ ಪಡಿತರ ಕಾರ್ಡ್ ಕಡಿತ  ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಿಜಬಣ್ಣ ಬಯಲಾಗುತ್ತಿದೆ ಎಂದು ಹರಿಹಾಯ್ದರು.

Key words:  stage, ready, stop, guarantee, HDK