Friday, September 11, 2026

BDA Apartments

Home Front Page SSLC  ಫಲಿತಾಂಶ: ಈ ಬಾರಿ 7 ವಿದ್ಯಾರ್ಥಿಗಳು ಟಾಪರ್: ದಕ್ಷಿಣ ಕನ್ನಡ ಫಸ್ಟ್

SSLC  ಫಲಿತಾಂಶ: ಈ ಬಾರಿ 7 ವಿದ್ಯಾರ್ಥಿಗಳು ಟಾಪರ್: ದಕ್ಷಿಣ ಕನ್ನಡ ಫಸ್ಟ್

ಬೆಂಗಳೂರು,ಏಪ್ರಿಲ್,23,2026 (www.justkannada.in):  ಇಂದು 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,  ಈ ವಾರಿ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ ಟಾಪರ್ ಆಗಿದ್ದಾರೆ.

ಇಂದು  ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಿದರು. ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಅಧಿಕೃತ ಜಾಲತಾಣದ ಲಿಂಕ್ www.karresults.nic.in ಗೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.

ಪರೀಕ್ಷೆ ಬರೆದ  7,70,209 ಲಕ್ಷ ಮಕ್ಕಳಲ್ಲಿ 7,26,794 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ಬರೊಬ್ಬರಿ ಶೇಕಡಾ 94.10 ರಷ್ಟು  ಫಲಿತಾಂಶ ಬಂದಿದೆ.

7 ವಿದ್ಯಾರ್ಥಿಗಳು ಚಿಕ್ಕಮಘಳೂರಿನ ವೃಂದ,  ಬೆಂಗಳೂರು ಉತ್ತರದ ಧನುಷ್,  ಉಡುಪಿ ಜಿಲ್ಲೆಯ ಪ್ರೀತಂ, ರಾಯಚೂರು ಜಿಲ್ಲೆಯ ಸುಖದೇವ್ , ದಾವಣಗೆರೆಯ ಭರತ್, ಚಿಕ್ಕೋಡಿ ಪ್ರಾರ್ಥನಾ ವಿಜಯಪುರದ ಸೌಜನ್ಯ  ಎಂಬ ವಿದ್ಯಾರ್ಥಿಗಳು 625 ಕ್ಕೆ 625 ಪೂರ್ಣ ಅಂಕಗಳನ್ನು ಪಡೆದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ದಕ್ಷಿಣ ಕನ್ನಡ ಫಸ್ಟ್, ಕಲ್ಬುರ್ಗಿ ಲಾಸ್ಟ್

ಫಲಿತಾಂಶದಲ್ಲಿ  ದಕ್ಷಿಣ ಕನ್ನಡ ಜಿಲ್ಲೆ  ಮೊದಲ ಸ್ಥಾನದಲ್ಲಿದ್ದರೇ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ  ಶೇ 98.40 ರಷ್ಟು,  ಉಡುಪಿ ಶೇ98.18 ರಷ್ಟು, ಉತ್ತರ ಕನ್ನಡದಲ್ಲಿ ಶೇ 90.09 ರಷ್ಟು ಫಲಿತಾಂಶ ಬಂದಿದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

Key words: SSLC Result,  7 students, toppers, Dakshina Kannada, First