ಸೈನಿಕರನ್ನ ಕರೆದುಕೊಂಡು ಹೋಗಿದ್ದಾರೆ. ಮತದಾರರು ಎಲ್ಲಿಯೂ ಹೋಗಿಲ್ಲ : ಸಂಸದ ಡಿ.ಕೆ.ಸುರೇಶ್

ಬೆಂಗಳೂರು,ಸೆಪ್ಟೆಂಬರ್,30,2020(www.justkannada.in) : ಸೈನಿಕರನ್ನ ಕರೆದುಕೊಂಡು ಹೋಗಿದ್ದಾರೆ. ಮತದಾರರು ಎಲ್ಲಿಯೂ ಹೋಗಿಲ್ಲ. ಮತದಾರರು ಪಕ್ಷದ ಪರವಾಗಿಯೇ ಇದ್ದಾರೆ. ಉಂಡು ಹೋದ ಕೊಂಡು‌ಹೋದ ಅನ್ನುವಂತಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.jk-logo-justkannada-logoಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆ ವಿಚಾರ ಸಂಬಂಧಿಸಿದಂತೆ ಮಾತನಾಡಿರುವ ಅವರು, ಉಪಚುನಾವಣೆ ದಿನಾಂಕ‌ ಘೋಷಣೆಯಾಗಿದೆ. ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ, ಚರ್ಚಿಸಿ ಪಕ್ಷದ ವರಿಷ್ಠರಿಗೆ ಅದನ್ನ ಕಳುಹಿಸಲಾಗುವುದು. ಸಮರ್ಥವಾಗಿ ಕೆಲಸ ಮಾಡುವವರನ್ನ ಕಣಕ್ಕಿಳಿಸುತ್ತೇವೆ ಎಂದಿದ್ದಾರೆ.

ಜೆಡಿಎಸ್ ನವರು ನನ್ನ ಜೊತೆ ಚೆನ್ನಾಗಿದ್ದಾರೆ. ಮಾಗಡಿ ಬಾಲಕೃಷ್ಣ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ ಹಲವರ ಹೆಸರು ಚರ್ಚೆಯಾಗ್ತಿದೆ. ಹೇಳೋದಕ್ಕೆ ಆಗಲ್ಲ, ಯಾರಾದರೂ ಆಗಬಹುದು. ಯುದ್ಧ ಪ್ರಾರಂಭವಾಗಿದೆ. ಮುನಿರತ್ನ ನನ್ನ ವೈರಿಯಲ್ಲ. ಭಾರತೀಯ ಜನತಾ ಪಕ್ಷ ನಮ್ಮ‌ವೈರಿ. ಮುನಿರತ್ನಂಗೆ ಟಿಕೆಟ್ ಸಂಬಂಧಿಸಿದಂತೆ ಅಚ್ಚರಿ ಕಾದು ನೋಡಿ ಏನಾಗುತ್ತದೆ ಎನ್ನುವ ಮೂಲಕ ಮುನಿರತ್ನಂ ಗೆ ಟಿಕೆಟ್ ಸಿಗೋದು ಡೌಟೆಂದು ಸುರೇಶ್ ತಿಳಿಸಿದ್ದಾರೆ.

key words : Soldiers’-take-away-Voters-nowhere-DK Suresh MP