ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶ: ಇಂದಿನಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ…

ಬೆಂಗಳೂರು,ಸೆಪ್ಟಂಬರ್,30,2020(www.justkannada.in): ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶ ಪಡೆಯಲು ಆರ್ಹತೆಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ.access-architecture-course-online-application-submission-begins

ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನಡಸುವ NATA-2020 ರಲ್ಲಿ ಅಥವಾ JEE paper-2  2020 ರಲ್ಲಿ ಆರ್ಹತೆ ಪಡೆದು ಸಿಇಟಿ-2020ಕ್ಕೆ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸದಿರುವ ಅಭ್ಯರ್ಥಿಗಳು ದಿನಾಂಕ 30-9-2020ರ ಮಧ್ಯಾಹ್ನ 2ಗಂಟೆಯಿಂದ 2-10-2020ರ ಸಂಜೆ 5 ಗಂಟೆರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹಾಗೆಯೇ 3-10-2020 ರೊಳಗೆ ಶುಲ್ಕವನ್ನು ಪಾವತಿಸಲು ಸೂಚಿಸಿದೆ.

ಇನ್ನು ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶಕ್ಕೆ ಆರ್ಹತೆ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಮತ್ತೊಂದು ಬಾರಿ ಅವಕಾಶವಿರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Key words: Access – Architecture Course- Online- Application- Submission- Begins