ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಿಂದ ಸ್ಮೃತಿ ಮಂಧಾನ ಔಟ್

ಬೆಂಗಳೂರು, ಅಕ್ಟೋಬರ್, 2019 (www.justkannada.in): ಭಾರತದ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರ ಬಿದ್ದಿದ್ದಾರೆ.

ಬಲಗಾಲಿನ ಬೆರಳಿಗೆ ಗಾಯವಾಗಿರುವುದರಿಂದ ಬುಧವಾರ (ಅಕ್ಟೋಬರ್ 9) ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಮೃತಿ ಪಾಲ್ಗೊಳ್ಳುತ್ತಿಲ್ಲ.

ಅಭ್ಯಾಸದ ವೇಳೆ ಚೆಂಡು ಕಾಲಿಗೆ ಬಡಿದು ಸ್ಮೃತಿ ಮಂಧಾನ ಗಾಯಗೊಂಡು ಸರಣಿಯಿಂದ ಹೊರ ಬಿದ್ದಿರುವುದನ್ನು ಬಿಸಿಸಿಐ ಖಾತರಿಪಡಿಸಿದೆ.