Sunday, August 16, 2026

BDA Apartments

Home Front Page ನಾಳೆ ಎಸ್.ಎಲ್ ಭೈರಪ್ಪ ಅವರ ‘ಪರ್ವ ವಿರಾಟ್ ದರ್ಶನ’ ವಿಚಾರ ಸಂಕಿರಣ…

ನಾಳೆ ಎಸ್.ಎಲ್ ಭೈರಪ್ಪ ಅವರ ‘ಪರ್ವ ವಿರಾಟ್ ದರ್ಶನ’ ವಿಚಾರ ಸಂಕಿರಣ…

ಮೈಸೂರು,ಫೆಬ್ರವರಿ,20,2021(www.justkannada.in): ನಾಳೆ(ಫೆ.21)  ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ‘ಪರ್ವ ವಿರಾಟ್ ದರ್ಶನ’ ಕುರಿತು ವಿಚಾರ ಸಂಕಿರಣವನ್ನ ಆಯೋಜನೆ ಮಾಡಲಾಗಿದೆ.jk

ನಗರದ ಕಲಾಮಂದಿರದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಖ್ಯಾತ ಕಾದಂಬರಿಕಾರರಾದ ಎಸ್.ಎಲ್ ಭೈರಪ್ಪ ಅವರು ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ಇದೇ ವೇಳೆ ‘ಪರ್ವ’ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನ ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಶತಾವದಾನಿ ಡಾ. ಆರ್. ಗಣೇಶ್ ಬಿಡುಗಡೆ ಮಾಡಲಿದ್ದಾರೆ.

ನಂತರ 10.30ಕ್ಕೆ ಪರ್ವ ವಿರಾಟ್ ದರ್ಶನ ಉಪನ್ಯಾಸ ಕಾರ್ಯಕ್ರಮ ಆರಂಭವಾಗಲಿದ್ದು,  ಪರ್ವ ನಾಟಕದ ನಿರ್ದೇಶಕರಾದ ಪ್ರಕಾಶ್ ಬೆಳವಾಡಿ ಅವರು ಚಿಗುರೊಡೆದ ಪರ್ವ ರಂಗ ಪ್ರಸ್ತುತಿ ಬಗ್ಗೆ ಮಾತನಾಡಲಿದ್ದಾರೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಂಗಾಯಣ ಮತ್ತು ರಂಗ ಪ್ರಸ್ತುತಿ ಪ್ರಸ್ತಾವನೆ ಕುರಿತು ಮಾತನಾಡಲಿದ್ದಾರೆ. SL Bhairappa's- Tomorrow -Parva -Virat Darshan- Seminar

ಕಾರ್ಯಕ್ರಮದಲ್ಲಿ ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ  ಗೌ|| ಕಾರ್ಯದರ್ಶಿ ಡಾ. ಜಿ.ಎಲ್ ಶೇಖರ್, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿರಲಿದ್ದಾರೆ.

Key words: SL Bhairappa’s- Tomorrow -Parva -Virat Darshan- Seminar