Thursday, August 13, 2026

BDA Apartments

Home Front Page ಸಿಂದಗಿ ಹಾನಗಲ್ ಉಪಚುನಾವಣೆ: ಅ.20ರಿಂದ ನಾಲ್ಕು ದಿನಗಳ ಕಾಲ ಮಾಜಿ ಸಿಎಂ ಬಿಎಸ್ ವೈ ಪ್ರಚಾರ

ಸಿಂದಗಿ ಹಾನಗಲ್ ಉಪಚುನಾವಣೆ: ಅ.20ರಿಂದ ನಾಲ್ಕು ದಿನಗಳ ಕಾಲ ಮಾಜಿ ಸಿಎಂ ಬಿಎಸ್ ವೈ ಪ್ರಚಾರ

ಬೆಂಗಳೂರು,ಅಕ್ಟೋಬರ್,15,2021(www.justkannada.in):  ತೀವ್ರ ಕುತೂಹಲ ಕೆರಳಿಸಿರುವ ಹಾನಗಲ್, ಸಿಂದಗಿ ವಿಧಾನಸಭೆ ಉಪಚುನಾವಣೆ  ಅಕ್ಟೋಬರ್ 30 ರಂದು ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರದ ಕಣಕ್ಕೆ ಇಳಿಯಲಿದ್ದಾರೆ.

ಅಕ್ಟೋಬರ್ 20 ರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಲ್ಕು ದಿನಗಳ ಕಾಲ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಕ್ಟೋಬರ್ 20, 21 ರಂದು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ಬಿ.ಎಸ್. ಯಡಿಯೂರಪ್ಪ, ಅಕ್ಟೋಬರ್ 22, 23 ರಂದು ಹಾನಗಲ್ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇನ್ನು ಸಿಎಂ ಬಸವರಾಜ ಬೊಮ್ಮಾಯಿ  ಅಕ್ಟೋಬರ್ 17 ರಂದು ಹಾನಗಲ್ ನಲ್ಲಿ ನಂತರ ಸಿಂದಗಿಯಲ್ಲಿ ಪ್ರಚಾರದಲ್ಲಿ ತೊಡಗಲಿದ್ದಾರೆ.

Key words: Sindagi- Hanagal- by-election- Former CM –BS yeddyurappa- campaign