ಮೈಶುಗರ್ ಸಕ್ಕರೆ ಕಾರ್ಖಾನೆ ಸಮಸ್ಯೆ ಬಗೆ ಹರಿಸೋಣ: ಚರ್ಚೆಗೆ ಬನ್ನಿ- ರೈತರಿಗೆ ಸಿಎಂ ಬೊಮ್ಮಾಯಿ ಭರವಸೆ.

ಮಂಡ್ಯ,ಅಕ್ಟೋಬರ್,15,2021(www.justkannada.in): ಅಕ್ಟೋಬರ್ 18 ರಂದು ಮೈಶುಗರ್ ಸಕ್ಕರೆ ಕಾರ್ಖಾನೆ ಸಮಸ್ಯೆ ಬಗ್ಗೆ ಚರ್ಚಿಸೋಣ. ಚರ್ಚೆಗೆ ಬನ್ನಿ ಎಂದು ರೈತರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸುತ್ತಿದ್ದ ವೇಳೆಯಲ್ಲಿ ಮಂಡ್ಯದಲ್ಲಿ ಧರಣಿ ನಿರತ ರೈತರನ್ನ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ, ಮೈಶುಗರ್ ಸಕ್ಕರೆ ಕಾರ್ಖಾನೆ ಬಗ್ಗೆ ಅಕ್ಟೋಬರ್ 18 ರಂದು ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸೋಣ ಅಂದೇ ಈ ಸಮಸ್ಯೆಗೆ ಒಂದು ಅಂತ್ಯ ಹಾಡೋಣ. ಎಲ್ಲಾ ಸಚಿವರು ನಿವೆಲ್ಲರೂ ಬನ್ನಿ ಚರ್ಚಿಸೋಣ. ನಿಮ್ಮ ಮೇಳೆ ಗೌರವವಿದೆ. ಮಾತು ಕೊಟ್ಟ ಮೇಲೆ ನಡೆಸಿಕೊಡಬೇಕು ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಸಂಜೆ 5ರಿಂದ 5.30ರ ವೇಳೆಗೆ ಚಾಲನೆ ನೀಡಲಿದ್ದಾರೆ. ನಂತರ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

Key words:  solve -Mysugar – factory- problem-  CM basavaraja Bommai – farmers.