ಸೆಮಿಕಂಡಕ್ಟರ್ ಅಸೆಂಬ್ಲಿ ಬಿಡಿಭಾಗಗಳ ಟೆಸ್ಟಿಂಗ್ ಹಾಗೂ ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಉತ್ಪಾದನಾ ಘಟಕ ಸ್ಥಾಪನೆಗೆ ಒಪ್ಪಂದಕ್ಕೆ ಸಹಿ.

ಬೆಂಗಳೂರು, ಆಗಸ್ಟ್ 24,2023(www.justkannada.in):  ಸೆಮಿಕಂಡಕ್ಟರ್  ಅಸೆಂಬ್ಲಿ ಬಿಡಿಭಾಗಗಳನ್ನು ಮತ್ತು ಟೆಸ್ಟಿಂಗ್  ಸೌಲಭ್ಯ, ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಉತ್ಪಾದನಾ ಘಟಕವನ್ನು ಮೈಸೂರಿನ ಕೋಚನಹಳ್ಳಿಯಲ್ಲಿ ಸ್ಥಾಪಿಸಲು ಇಂದು ಕೇನ್ಸ್ ಟೆಕ್ನಾಲಜೀಸ್ ಸಂಸ್ಥೆ ಹಾಗೂ ಕೈಗಾರಿಕಾ ಇಲಾಖೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ  ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದಿಂದ ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಉತ್ಪಾದನಾ ಅಭಿವೃದ್ಧಿಗೆ ಪೂರಕವಾಗಲಿದೆ. ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.

ಈ ಸಂದರ್ಭದಲ್ಲಿ ಆರ್.ಡಿ.ಪಿಆರ್ ಮತ್ತು ಐ.ಟಿ ಬಿಟಿ ಸಚಿವ  ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣಾ, ಕೇನ್ಸ್ ಸಂಸ್ಥೆಯ ಸಿಇಒ ರಮೇಶ್ ಕಣ್ಣನ್, ಉಪಸ್ಥಿತರಿದ್ದರು.

Key words: Signing – contract – Semiconductor –Assembly- Parts -Testing