ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ವಿಚಾರ: ಬಿಜೆಪಿಗೆ ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ ಸಿದ್ಧರಾಮಯ್ಯ.

ಬೆಂಗಳೂರು,ಜನವರಿ,9,2023(www.justkannada.in):  ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನ ನಾಲ್ಕೈದು ತಿಂಗಳು ಬಾಕಿ ಇದ್ದು, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ಇಂದು ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಮಾಡಲು ಮುಂದಾಗಿದೆ.

ಈ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಜೆಪಿಗೆ  ಎಚ್ಚರಿಕೆ ನೀಡಿದ್ದಾರೆ.   ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿಯೇ.  ಟಿಪ್ಪು ಡ್ರೆಸ್ ಹಾಕಿ ಖಡ್ಗ ಹಿಡಿದವರು ಯಾರು? ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದವರು ಯಾರು. ನನ್ನ ತೇಜೋವಧೆ ಮಾಡಲು ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಇಂತಹ ಪುಸ್ತಕ ತರುತ್ತಿದ್ದಾರೆ. ಕಾನೂನು ಪ್ರಕಾರ ಏನು ಮಾಡುಲು ಆಗುತ್ತೇ ನೋಡುತ್ತೇನೆ ಎಂದರು.

ಇನ್ನೊಂದೆಡೆ, ಬಿಜೆಪಿಯ ಸಿದ್ದು ನಿಜ ಕನಸುಗಳು ಪುಸ್ತಕದ ಪ್ರತಿಯಾಗಿ ಸಿದ್ದರಾಮಯ್ಯ ಆಪ್ತರಿಂದಲೂ ಪುಸ್ತಕ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

Key words: Siddu Nijakanasugalu –book- release- issue- Siddaramaiah – BJP – defamation case.