ಮೀಸಲಾತಿ ಹೆಚ್ಚಳ ಬಿಜೆಪಿಯ ಐತಿಹಾಸಿಕ ತೀರ್ಮಾನ: ಕಾಂಗ್ರೆಸ್ ಇನ್ನಾದರೂ ವಾಸ್ತವ ಸ್ಥಿತಿ ತಿಳಿಯಲಿ- ಮಾಜಿ ಸಿಎಂ ಬಿಎಸ್ ವೈ.

ಶಿವಮೊಗ್ಗ,ಜನವರಿ,9,2023(www.justkannada.in): ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ  ಬಿಜೆಪಿಯ ಐತಿಹಾಸಿಕ ತೀರ್ಮಾನವಾಗಿದೆ: ಕಾಂಗ್ರೆಸ್ ಇನ್ನಾದರೂ ವಾಸ್ತವ ಸ್ಥಿತಿ ಅರಿತು ಮಾತನಾಡಲಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ,  ಎಸ್ ಸಿ  ಮತ್ತು ಎಸ್ ಟಿ ಸಮುದಾಯದ ಮೀಸಲಾತಿ ಹೆಚ್ಚಳದ ಬಗ್ಗೆ ಕಾಂಗ್ರೆಸ್ ನವರು ತಿರುಚಿ ಮನಬಂದಂತೆ ಮಾತನಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ.ಇನ್ನಾದರೂ ವಾಸ್ತವಿಕ ಸ್ಥಿತಿ ತಿಳಿಯಲಿ ಎಂದರು.

ಈಶ್ವರಪ್ಪಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್ ಗೆ ಬಿಟ್ಟಿದ್ದು

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿದೆ. ಎಷ್ಟು ಸ್ಥಾನ ಭರ್ತಿಯಾಗಲಿದೆ  ಎಂಬ ಬಗ್ಗೆ ತಿಳಿದಿಲ್ಲ.  ಶಾಸಕ ಕೆ.ಎಸ್ ಈಶ್ವರಪ್ಪಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟಿದ್ದು ಆದರೆ ಈಶ್ವರಪ್ಪಗೆ ಸಚಿವ ಸ್ಥಾನ ಸಿಗಲಿ ಎಂದು ಬಿಎಸ್ ವೈ ತಿಳಿಸಿದರು.

Key words: Reservation-increase –BJP- Congress -real situation- Former CM -B.S.Yeddyurappa