ಸಿದ್ಧರಾಮಯ್ಯ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ, ಆದ್ರೆ ಯಶಸ್ಸು ಕಾಣಲ್ಲ- ಸಚಿವ ಸುನೀಲ್ ಕುಮಾರ್ ಲೇವಡಿ.

ಉಡುಪಿ,ಜನವರಿ,9,2023(www.justkannada.in): ವಿಧಾನಸಭಾ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ಧರಾಮಯ್ಯ ಘೋಷಿಸಿದ ಬೆನ್ನಲ್ಲೆ ಬಿಜೆಪಿ ನಾಯಕರಿಂದ ಟೀಕೆಗಳು ಶುರುವಾಗಿದ್ದು ಇದೀಗ ಇಂಧನ ಸಚಿವ ಸುನೀಲ್ ಕುಮಾರ್ ಅವರು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಲೇವಡಿ ಮಾಡಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್,  15 ವರ್ಷದಿಂದ ಜನರಿಗೆ ಕೈಕೊಟ್ಟವರು ಸಿದ್ಧರಾಮಯ್ಯ. ವರುಣಾ ಜನ ಪಾರಂಪರಿಕವಾಗಿ ಗೆಲ್ಲಿಸುತ್ತಿದ್ದರು.  2013ರಲ್ಲಿ ವರುಣಾ ಕ್ಷೇತ್ರದ ಜನರಿಗೆ ಕೈಕೊಟ್ಟರು. ಬಾದಾಮಿ ಜನರಿಗೂ ಕೈಕೊಡುತ್ತಿದ್ದಾರೆ.  ಇದೀಗ ಕೋಲಾರದಲ್ಲಿ ಸ್ಪರ್ಧಿಸಲು ಹೊರಟಿದ್ದಾರೆ. ಕೋಲಾರ ಜನ ಸಿದ್ಧರಾಮಯ್ಯಗೆ ಕೈಕೊಡಬೇಕು ಎಂದು ಹೇಳಿದರು.

ಸಿದ್ಧರಾಮಯ್ಯ ಕ್ಷೇತ್ರ ಬದಲಿಸುತ್ತಾ ಜನರಿಂದ ದೂರ ಆದರು.  ಈಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.  ಆದರೆ ಅದರಲ್ಲಿ ಯಶಸ್ಸು ಕಾಣಲ್ಲ. ಸಿದ್ಧರಾಮಯ್ಯಗೆ ಬದ್ಧತೆ ಕಮಿಟ್ ಮೆಂಟ್ ಇಲ್ಲ.  ಕೋಲಾರದ ಜನ ಪ್ರಬುದ್ಧತೆಯಿಂದ ಮತ ಹಾಕಬೇಕು ಎಂದು ಸುನೀಲ್ ಕುಮಾರ್ ಹೇಳಿದರು.

Key words: Siddaramaiah – new experiment- no success-Minister -Sunil Kumar