ಮಹಿಳೆಯರಿಗಾಗಿ ‌ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲು ತೀರ್ಮಾನ- ಡಿ.ಕೆ ಶಿವಕುಮಾರ್.

ಬೆಂಗಳೂರು,ಜನವರಿ,9,2023(www.justkannada.in): ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ‍್ಧತೆ ಆರಂಭಿಸಿರುವ ಕಾಂಗ್ರೆಸ್ ಮಹಿಳೆಯರಿಗಾಗಿ ‌ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲು ತೀರ್ಮಾನಿಸಿದೆ.

ಈ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ರಾಜ್ಯದ ಜನರಿಗೆ ಬಿಜೆಪಿಯವರು ಕೊಟ್ಟ ಭರವಸೆಯನ್ನ ಈಡೇರಿಸಿಲ್ಲ, ದಿನಬಳಕೆಯ ವಸ್ತುಗಳ ಬೆಲೆ ಶೇಕಡಾ 60ರಷ್ಟು ಹೆಚ್ಚಾಗಿದೆ. ಮಹಿಳೆಯರಿಗಾಗಿ ‌ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುವ ಮೂಲಕ ಮಹಿಳೆಯರ ಪರವಾಗಿ ನಿಲ್ಲಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು.

ಸ್ಯಾಂಟ್ರೋ ರವಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಸ್ಯಾಂಟ್ರೊ, ಆಡಿ, ಮರ್ಸಿಡೀಸ್ ಎಂದು ಟಿವಿಯಲ್ಲಿ ತೋರಿಸುತ್ತಿದ್ದರು. ಅವರಿಗೂ ಬಿಜೆಪಿಯವರಿಗೂ ಇರುವ ಸಂಬಂಧ ನೀವೇ ತೋರಿಸಿದ್ದೀರಿ. ಜೊತೆಗೆ ಹೆಚ್​.ಡಿ ಕುಮಾರಸ್ವಾಮಿ ಅವರು ಕೂಡ ಈ ವಿಚಾರವಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯವರು ಇಂತಹವರನ್ನು ರಕ್ಷಣೆ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿಯವರು ಹಾಗೂ ಗೃಹ ಸಚಿವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಆದರೆ ಆ ಕೆಲಸ ಮಾಡ್ತಾಯಿಲ್ಲ. ಅವರ ವಿರುದ್ಧ ಆರೋಪ ಬಂದಾಗ ಪಾರದರ್ಶಕವಾದ ತನಿಖೆ ಮಾಡಬೇಕು ಆಗ ಸತ್ಯ ಹೊರಗಡೆ ಬರುತ್ತದೆ ಎಂದು ಹೇಳಿದರು.

Key words: Decision – prepare – separate- manifesto-women-DK Shivakumar.