Wednesday, October 7, 2026

BDA Apartments

immense respect BDA JK_Adv BDA Adv
Home Front Page ಕಾಂಗ್ರೆಸ್ ಸೇರ್ಪಡೆಗೆ ಅವಕಾಶ ನೀಡಿದ್ರೆ ಕ್ಷೇತ್ರಕ್ಕಾಗಿ ಹಠ ಹಿಡಿಯಲ್ಲ- ಪಕ್ಷೇತರ ಶಾಸಕ ಹೆಚ್. ನಾಗೇಶ್

ಕಾಂಗ್ರೆಸ್ ಸೇರ್ಪಡೆಗೆ ಅವಕಾಶ ನೀಡಿದ್ರೆ ಕ್ಷೇತ್ರಕ್ಕಾಗಿ ಹಠ ಹಿಡಿಯಲ್ಲ- ಪಕ್ಷೇತರ ಶಾಸಕ ಹೆಚ್. ನಾಗೇಶ್

ಬೆಂಗಳೂರು,ಜನವರಿ,9,2023(www.justkannada.in): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳುಬಾಗಿಲು ಕ್ಷೇತ್ರದಿಂದ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಶಾಸಕ ಹೆಚ್. ನಾಗೇಶ್ ಇದೀಗ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.

ಈ ಸಂಬಂಧ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನ  ಶಾಸಕ ಹೆಚ್.ನಾಗೇಶ್ ಭೇಟಿಯಾಗಿ ಚರ್ಚಿಸಿದ್ದಾರೆ. ಕೆಪಿಸಿಸಿ ಕಚೇರಿಗೆ ಭೇಟಿ ಬಳಿಕ ಮಾತನಾಡಿದ ಹೆಚ್.ನಾಗೇಶ್,  ಕಾಂಗ್ರೆಸ್ ನಿಂದ ಮುಳುಬಾಗಿಲು ಕ್ಷೇತ್ರದ ಟಿಕೆಟ್ ಕೇಳು ಬಂದಿದ್ದೆ. ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿದ್ದೆ.  ಆದರೆ ಡಿಕೆ ಶಿವಕುಮಾರ್ ಬ್ಯುಸಿ ಇದ್ದೇನೆ ನಾಳೆ ಬಾ ಅಂದ್ರು. ಕಾಂಗ್ರಸ್ ಸೇರ್ಪಡೆಗೆ ಅವಕಾಶ ನೀಡಿದರೇ ಕ್ಷೇತ್ರಕ್ಕಾಗಿ ಹಠ ಹಿಡಿಯಲ್ಲ.  ಇಂತಹದ್ದೇ ಕ್ಷೇತ್ರದ ಟಿಕೆಟ್ ಬೇಕೆಂದು ಹಠ ಹಿಡಿಯಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಟರು ಹೇಳಿದಂತೆ ಕೇಳುತ್ತೇನೆ ಎಂದರು.

ಮುಳುಬಾಗಿಲು ಕ್ಷೇತ್ರದಲ್ಲಿ ಸಾಕಷ್ಟು  ಕೆಲಸ ಮಾಡಿದ್ದೇನೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಎಂಬ ಬಗ್ಗೆ ತೀರ್ಮಾನಿಸಲು ಸಾಕಷ್ಟು ಸಮಯವಿದೆ.   ಬಿಜೆಪಿ ನಾಯಕರು ನಡೆಸಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೆಚ್.ನಾಗೇಶ್ ತಿಳಿಸಿದರು.

Key words: Congress – allowed – join,-MLA -H. Nagesh