Saturday, September 19, 2026

BDA Apartments

ಬಜರಂಗದಳದ ಕಾರ್ಯಕರ್ತನ ಹತ್ಯೆಗೆ ಯತ್ನ ಖಂಡಿಸಿ ಸಾಗರ ಬಂದ್ BDA JK_Adv BDA Adv
Home Front Page ಬಜರಂಗದಳದ ಕಾರ್ಯಕರ್ತನ ಹತ್ಯೆಗೆ ಯತ್ನ ಖಂಡಿಸಿ ಸಾಗರ ಬಂದ್.

ಬಜರಂಗದಳದ ಕಾರ್ಯಕರ್ತನ ಹತ್ಯೆಗೆ ಯತ್ನ ಖಂಡಿಸಿ ಸಾಗರ ಬಂದ್.

ಶಿವಮೊಗ್ಗ,ಜನವರಿ,10,2023(www.justkannada.in):  ಬಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ಖಂಡಿಸಿ ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಬಂದ್ ಗೆ ಕರೆ ನೀಡಲಾಗಿದೆ.

ನಿನ್ನೆ ಬೆಳಿಗ್ಗೆ ಸಮೀರ್ ಎಂಬಾತ ಬಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲು ಯತ್ನಿಸಿದ್ದ. ಆದರೆ ಸುನೀಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಸಾಗರದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಸುನೀಲ್ ಹತ್ಯೆಗೆ ಯತ್ನ ಖಂಡಿಸಿ ಬಜರಂಗ ದಳ  ಇಂದು ಸಾಗರ್ ಬಂದ್ ಗೆ ಕರೆ ನೀಡಿದ್ದು, ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲಾಗಿದೆ. ಅಂಗಡಿ ಮುಂಗಟ್ಟು ತೆರೆಯದಂತೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.ಬಜರಂಗದಳದ ಕಾರ್ಯಕರ್ತನ ಹತ್ಯೆಗೆ ಯತ್ನ ಖಂಡಿಸಿ ಸಾಗರ ಬಂದ್ bandh

ಇನ್ನು ಆರೋಪಿ ಸಮೀರ್ ನನ್ನು ಪೊಲೀಸರು ವಶಕ್ಕೆ  ಪಡೆದಿದ್ದಾರೆ. ತಡರಾತ್ರಿ ಶಿವಮೊಗ್ಗದಲ್ಲಿ ಸಮೀರ್ ವಶಕ್ಕೆ ಪಡೆದಿದ್ದಾರೆ.

Key words: Sagar -bandh –condemn- attempt – kill- Bajrang Dal -activist.