Sunday, August 16, 2026

BDA Apartments

Home Front Page ವಿಪಕ್ಷ ಸ್ಥಾನದಿಂದ ಕೆಳಗೆ ಇಳಿದ್ರೆ ಸಿದ್ಧರಾಮಯ್ಯ ಪಕ್ಷ ಬಿಡ್ತಾರೆ- ಸಚಿವ ಕೆ.ಎಸ್ ಈಶ್ವರಪ್ಪ.

ವಿಪಕ್ಷ ಸ್ಥಾನದಿಂದ ಕೆಳಗೆ ಇಳಿದ್ರೆ ಸಿದ್ಧರಾಮಯ್ಯ ಪಕ್ಷ ಬಿಡ್ತಾರೆ- ಸಚಿವ ಕೆ.ಎಸ್ ಈಶ್ವರಪ್ಪ.

ಚಿಕ್ಕಮಗಳೂರು,ಜನವರಿ,26,2022(www.justkannada.in): ವಿಪಕ್ಷ ಸ್ಥಾನದಿಂದ ಕೆಳಗೆ ಇಳಿದ್ರೆ ಸಿದ್ಧರಾಮಯ್ಯ ಪಕ್ಷ ಬಿಡ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ಗೆದ್ದಲು ತಿಂದಿರುವ ಮರ. ಕಾಂಗ್ರೆಸ್ ಪಕ್ಷ ಅಂತಾ ಕರೆಯಬೇಕಾ..? ಸಿದ್ಧರಾಮಯ್ಯ ಡಿಕೆ  ಶಿವಕುಮಾರ್ ಕಾಂಗ್ರಸ್ ಮುಗಿಸುತ್ತಾರೆ ಎಂದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಲು ಸಿದ್ಧ ಇರುವ ಬಿಜೆಪಿಯ ಒಬ್ಬ ಶಾಸಕರ ಹೆಸರನ್ನಾದರೂ ಹೇಳಬೇಕು, ಪುಕ್ಸಟ್ಟೆ ಮಾತನಾಡಬಾರದು. ಕಾಂಗ್ರೆಸ್‌ ಕೊಳೆತ ಹಣ್ಣು, ಬಿಜೆಪಿಯು ಮೋದಿ ನೇತೃತ್ವದ ಸೇಬು ಹಣ್ಣು. ಕೊಳೆತ ಹಣ್ಣನ್ನು ಯಾರಾದರೂ ಇಷ್ಟಪಡುತ್ತಾರಾ? ಕಾಂಗ್ರೆಸ್‌ಗೆ ಬೇಡಿಕೆ ಸೃಷ್ಟಿಸಿಕೊಳ್ಳಲು ಈ ರೀತಿ ಆಟವಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

Key words: Siddaramaiah-Minister- KS Eshwarappa.