ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ:  ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಅಪಪ್ರಚಾರ ಎಂದ ಆರ್.ಧೃವನಾರಾಯಣ್.

ಚಾಮರಾಜನಗರ,ಆಗಸ್ಟ್,22,2022(www.justkannada.in): ಮಾಂಸ ತಿಂದು ದೆಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ  ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.ಧೃವನಾರಾಯಣ್ ಹೇಳಿದರು.

ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ   ಆರ್.ಧೃವನಾರಾಯಣ್,  ಇಂಥ ವಿಷಯ ಹಬ್ಬಿಸುವುದರಲ್ಲಿ ನಿಸ್ಸಿಮರು. ಅಭಿವೃದ್ಧಿ ವೈಪಲ್ಯ ಮರೆಮಾಚಲು ಷಡ್ಯಂತ್ರ , ಚುನಾವಣೆ ಬಂದಾಗ ಕೋಮು ಭಾವನೆ ಕೆರಳಿಸುತ್ತಾರೆ. ಸಿದ್ಧರಾಮಯ್ಯ ಜನಪ್ರೀಯತೆ ಸಹಿಸಲಾಗದೆ ಅಪಪ್ರಚಾರ ಮಾಡಲಾಗಿದೆ ಎಂದರು.

ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ ಕಾರ್ಯಕರ್ತನಲ್ಲ. ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸಿಮರು.  ಸಂಪತ್  ಅಪ್ಪಚ್ಚು ರಂಜನ್ ಜತೆಗಿರುವ ಫೋಟೊ ಇದೆ. ಇದಕ್ಕಿಂತ ಉದಹಾರಣೆ ಬೇಕಾ..?  ಎಂದು ಪ್ರಶ್ನಿಸಿದರು.

Key words: siddaramaiah-meat-temple-R.dhruva narayan