ಸಿಎಂ ಮಾಧ್ಯಮ ಕಾರ್ಯದರ್ಶಿ ಗುರುಲಿಂಗಸ್ವಾಮಿ ಇನ್ನಿಲ್ಲ.

ಬೆಂಗಳೂರು,ಆಗಸ್ಟ್,22,2022(www.justkannada.in):   ಸಿಎಂ ಬಸವರಾಜ ಬೊಮ್ಮಾಯಿ‌ ಅವರ ಮಾಧ್ಯಮ ಸಂಯೋಜಕ ಗುರಲಿಂಗಸ್ವಾಮಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುರುಲಿಂಗ ಸ್ವಾಮಿ ಅವರು ಬೆಳಗ್ಗೆ ಜಿಮ್‌ ಗೆ ಹೊಗಿ ವರ್ಕೌಟ್ ಮಾಡುವಾಗ  ಎದೆನೋವು ಕಾಣಿಸಿಕೊಂಡಿದೆ.  ಈ ನಡುವೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ನಿಧನರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ‌ ಗೃಹ ಸಚಿವರಾದಾಗಿಂದ  ಗುರುಲಿಂಗ ಸ್ವಾಮಿ ಮಾಧ್ಯಮ ವರ್ಗ ನೋಡಿಕೊಳ್ಳುತ್ತಿದ್ದರು.

ಸಿಎಂ ಮಾಧ್ಯಮ ಕಾರ್ಯದರ್ಶಿಯಾಗಿ ವರ್ಷದಿಂದ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಸೇವೆ ಸಲ್ಲಿಸುತ್ತಿದ್ರು.   ಹಲವು ಪತ್ರಿಕೆಗಳಲ್ಲಿ ಮತ್ತು ಸುದ್ದಿವಾಹಿನಿಗಳಲ್ಲಿ ಸೇವೆ ಸಲ್ಲಿಸಿದ್ದರು.  ಬೆಂಗಳೂರು ಮತ್ತು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಿರಿಯ ವರದಿಗಾರರಾಗಿ ಸೇವೆ ಮಾಡಿದ್ದರು.

Key words: CM’s -Media Secretary -Gurulingaswamy – no more

ENGLISH SUMMARY…

CM’s Media Secretary Gurulingaswamy no more
Bengaluru, August 22, 2022 (www.justkannada.in): Chief Minister Basavaraj Bommai’s media Coordinator Gurulingaswamy today died of a heart attack.
He felt pain in the chest while he was working out in the gym today morning. He breathed his last on his way to the hospital. Gurulingaswamy was the media coordinator for Basavaraj Bommai since when the latter was the Home Minister.
Gurulingaswamy was serving as the senior journalist and as the media coordinator to the CM for one year. He had also served in several reputed prints and electronic media houses.
Keywords: Gurulingaswamy/ no more/ CM’s Media Coordinator