ಈದ್ಗಾ ಮೈದಾನ ವಿವಾದ: ಅನುಮತಿ ಕೊಡದಿದ್ದರೂ ಗಣೇಶೋತ್ಸವ ಆಚರಿಸುತ್ತೇವೆ- ಪ್ರಮೋದ್ ಮುತಾಲಿಕ್ ಎಚ್ಚರಿಕೆ.

ಹುಬ್ಬಳ್ಳಿ,ಆಗಸ್ಟ್,22,2022(www.justkannada.in): ಈದ್ಗಾ ಮೈದಾನದಲ್ಲಿ ಅನುಮತಿ ಕೊಡದಿದ್ರೂ ಗಣೇಶನ ಕೂರಿಸ್ತೇವೆ. ಅದೇನು ಮಾಡ್ತೀರೋ ನಾವು ನೋಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಬೆಂಬಲ ಕೋರಿ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಮೋದ್ ಮುತಾಲಿಕ್,  ಗಣೇಶೋತ್ಸವಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈದ್ಗಾ ಮೈದಾನ ನಿಮ್ಮ ಸ್ವತ್ತಲ್ಲ. ಸಾರ್ವಜನಿಕರ ಸ್ವತ್ತು. ಅನುಮತಿ ಕೊಡದಿದ್ರೂ ಗಣೇಶನ ಕೂರಿಸ್ತೇವೆ. ಗಣೇಶ ಪ್ರತಿಷ್ಟಾಪನೆಗೆ ಅವಕಾಶ ಕೊಡಬೇಕು.

ಈದ್ಗಾ ಮೈದಾನದಲ್ಲಿ ಮುಸ್ಲೀಂರಿಗೆ ಅವಕಾಶ ನೀಡುತ್ತಾರೆ. ಹೀಗಾಗಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕು ಇಲ್ಲದಿದ್ದರೇ ಅಗಸ್ಟ್ 26 ರಂದು ಶೆಟ್ಟರ್ ಮನೆ ಮುಂದೆ  ಪ್ರತಿಭಟನೆ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

Key words: permission – not given- celebrate –Ganeshotsava-Pramod Muthalik