ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ ಎಂದ ಹೆಚ್.ಡಿಕೆಗೆ ಸಿದ್ಧರಾಮಯ್ಯ ತಿರುಗೇಟು.

ಬೆಂಗಳೂರು,ಜೂನ್,11,2022(www.justkannada.in): ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್  ಬಿಜೆಪಿ ಡೀಲ್ ಮಾಡಿಕೊಂಡಿವೆ. ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತಾ ಗೊತ್ತಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಬೆಂಬಲಿಸಿದ್ದು ಯಾರು..?  ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದು ಯಾರು..?  ಕುಮಾರಸ್ವಮಿ ಏನೇನೋ ಹೇಳ್ತಾರೆ.

ರಾಜ್ಯಸಭಾ ಚುನಾವಣೆಗೆ  ಮೊದಲು ನಾವು ಅಭ್ಯರ್ಥಿ ಹಾಕಿದ್ದವು. ಹೆಚ್.ಡಿ ದೇವೇಗೌಡರು ರಾಜ್ಯಸಭೆಗೆ ಹೋಗಲು ಬೆಂಬಲಿಸಲಿಲ್ವಾ.  ಈ ಬಾರಿ ಜೆಡಿಎಸ್ ಈಗ ನಮ್ಮ ಬೆಂಬಲಿಸಬೇಕಿತ್ತು.  ಕಾಂಗ್ರೆಸ್ 2ನೇ ಅಭ್ಯರ್ಥಿ ಗೆಲ್ಲಲ್ಲ ಅಂತಾ ಗೊತ್ತಿತ್ತು. ಹೀಗಾಗಿ ಈ ಬಾರಿ ಜೆಡಿಎಸ್ ಕಾಂಗ್ರೆಸ್ ಅನ್ನ ಬೆಂಬಲಿಸಬೇಕಿತ್ತು ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.

Key words: Siddaramaiah- HD Kumaraswamy-BJP- B Team