ಅಕ್ಟೋಬರ್ 21ರಂದು ‘ಹೆಡ್ ಬುಷ್’ ರಿಲೀಸ್: ತೆರೆ ಮೇಲೆ ಡಾನ್ ಆಗಲಿದ್ದಾರೆ ಡಾಲಿ

ಬೆಂಗಳೂರು, ಜೂನ್ 11, 2022 (www.justkannada.in): ಭೂಗತ ಲೋಕದಲ್ಲಿ ​ಡಾನ್ ಆಗಿ ಮೆರೆದಿದ್ದ ಜಯರಾಜ್ ​ ಕುರಿತು ಈಗ ‘ಹೆಡ್​ ಬುಷ್​’ ಸಿನಿಮಾ ರಿಲೀಸ್ ಗೆ ಸಿದ್ಧಗೊಂಡಿದೆ.

ಹೌದು. ಡಾಲಿ ಧನಂಜಯ ಈ ಚಿತ್ರದಲ್ಲಿ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,. ಶೂಟಿಂಗ್ ಪೂರ್ಣಗೊಂಡಿದೆ. ಹೀಗಾಗಿ ಚಿತ್ರತಂಡ ರಿಲೀಜ್ ಡೇಟ್ ನಿಗದಿ ಮಾಡಿದೆ.

ಈ ಸಿನಿಮಾ ಅಕ್ಟೋಬರ್ 21ರಂದು ರಿಲೀಸ್ ಆಗುತ್ತಿರುವ ಬಗ್ಗೆ ಧನಂಜಯ ಅವರು ಮಾಹಿತಿ ನೀಡಿದ್ದಾರೆ.

ಎಂ.ಪಿ. ಜಯರಾಜ್ ಜೀವನಾಧಾರಿತ ಸಿನಿಮಾ ‘ಹೆಡ್​ ಬುಷ್’. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸಿದ್ದಾರೆ.

ರಿಲೀಸ್ ದಿನಾಂಕದ ವಿಚಾರವನ್ನು ಧನಂಜಯ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.