Thursday, September 10, 2026

BDA Apartments

Home Front Page ಸಿಎಂ ಆದ ನಂತರ ಅಹಿಂದ ವರ್ಗವನ್ನೇ ಮರೆತವರು ಸಿದ್ಧರಾಮಯ್ಯ- ನಳೀನ್ ಕುಮಾರ್ ಕಟೀಲ್ ಟೀಕೆ…

ಸಿಎಂ ಆದ ನಂತರ ಅಹಿಂದ ವರ್ಗವನ್ನೇ ಮರೆತವರು ಸಿದ್ಧರಾಮಯ್ಯ- ನಳೀನ್ ಕುಮಾರ್ ಕಟೀಲ್ ಟೀಕೆ…

ಮೈಸೂರು,ಡಿಸೆಂಬರ್,16,2020(www.justkannada.in):  ಸಿದ್ಧರಾಮಯ್ಯ ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತವರು. ಸಿಎಂ ಆದ ನಂತರ ಸಿದ್ದರಾಮಯ್ಯ ಅಹಿಂದ ವರ್ಗವನ್ನೇ ಮರೆತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದರು.siddaramaiah-forgot-community-becoming-cm-mysore-naleen-kumar-kateel

ಮೈಸೂರಿನ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ  ಮಾತನಾಡಿದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ನೇತೃತ್ವದಲ್ಲಿ ಚಳುವಳಿ ನಡೆಯಿತು, ಎಲ್ಲ ವರ್ಗದವರು ಬೆಂಬಲಿಸಿದರು. ಆದರೆ ಸಿದ್ದರಾಮಯ್ಯ ಸಿಎಂ ಆದ ನಂತರ ಅಹಿಂದ ವರ್ಗವನ್ನೇ ಮರೆತರು  ಎಂದು ವಾಗ್ದಾಳಿ ನಡೆಸಿದರು.

ಅಧಿಕಾರದಲ್ಲಿರುವಾಗ ನಮ್ಮ ಪರ ನಿಂತ ಸಮುದಾಯಗಳ ಪರ ಕೆಲಸ ಮಾಡಬೇಕು. ಪ್ರತಿ ವರ್ಗಗಳಿಗೂ ಮೋರ್ಚಾಗಳನ್ನ ನೇಮಕಗೊಳಿಸಿ ತಳಮಟ್ಟದ ಕಾರ್ಯಕರ್ತರ ಮೂಲಕ ಬಿಜೆಪಿ ಆಯಾ ಸಮುದಾಯಗಳ ಸಮಸ್ಯೆ ಪರಿಹರಿಸಬೇಕು ಎಂದು ಸಲಹೆ ನೀಡಿದರು.

ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಕೇವಲ ಮೇಲ್ವರ್ಗದ ಪಕ್ಷ ಎಂಬಂತೆ ಇತ್ತು. ಆದ್ರೆ ಇವತ್ತು ಎಲ್ಲ ವರ್ಗದವರು ಪಕ್ಷದ ಮುಂಚೂಣಿಯ ಕುರ್ಚಿಯಲ್ಲಿದ್ದಾರೆ. ಬಿಜೆಪಿ ಎಲ್ಲ ವರ್ಗದ ಸ್ಪರ್ಶ ಪಡೆದಿದೆ. ಇವತ್ತು ದೇಶದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗಗಳ ಶಾಸಕರು ಬಿಜೆಪಿ ಪಕ್ಷದಲ್ಲಿದ್ದಾರೆ.  ಇದು ಬಿಜೆಪಿಯ ಶಕ್ತಿ ಎಂದು ನಳೀನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದರು. siddaramaiah-forgot-community-becoming-cm-mysore-naleen-kumar-kateel

ಹಾಗೆಯೇ ಸಮುದಾಯ, ಸಮಾಜವನ್ನ ಕಡೆಗಣಿಸಿ ಕಾಂಗ್ರೆಸ್ ಇಂದು ಅವನತಿ ಕಾಣುತ್ತಿದೆ.ಈ ಹಿನ್ನೆಲೆ ಜನರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.

Key words: Siddaramaiah – forgot – community – becoming- CM-mysore- Naleen Kumar Kateel