ಸಿದ್ಧರಾಮಯ್ಯ ಯಾವಾಗ ಜೋತಿಷ್ಯ ಹೇಳ್ತಾರೋ ಗೊತ್ತಾಗಲ್ಲ- ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯ…

ಮೈಸೂರು,ಜನವರಿ,19,2021(www.justkannada.in):   ಸಿಎಂ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ  ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಟಾಂಗ್ ನೀಡಿದ್ದಾರೆ.jk

ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಸಿದ್ಧರಾಮಯ್ಯ ಯಾವಾಗ ಜೋತಿಷ್ಯ ಹೇಳ್ತಾರೋ ಗೊತ್ತಾಗಲ್ಲ. ಬಿಡುವಿನ ವೇಳೆ ಅವರು ಜೋತಿಷ್ಯ ಕಲಿಯುತ್ತಿರಬೇಕು. ಅವರು ಪದೇ ಪದೇ ಈ ರೀತಿ ಹೇಳುವುದನ್ನ ಬಿಡಬೇಕು ಎಂದು ಕಿಡಿಕಾರಿದರು.Siddaramaiah –does- not know - say –astrology-Minister -ST Somashekhar

ರಾಝ್ಯ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಅದನ್ನ ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಸಿದ್ಧರಾಮಯ್ಯರ ಪ್ರಮಾಣಪತ್ರ ಬೇಕಾಗಿಲ್ಲ. ಸಿದ್ಧರಾಮಯ್ಯ ಅವರು ಅವರ ತಟ್ಟಿಯಲ್ಲಿ ಏನು ಬಿದ್ದಿದೆ ಎಂಬುದನ್ನ ನೋಡಿಕೊಳ್ಳಲಿ. ಅಮೇಲೆ ಬೇರೆಯವರ ಬಗ್ಗೆ ಮಾತನಾಡಲಿ ಎಂದು ಎಸ್.ಟಿ ಸೋಮಶೇಖರ್ ಲೇವಡಿ ಮಾಡಿದರು.

Key words: Siddaramaiah –does- not know – say –astrology-Minister -ST Somashekhar