ಮತ್ತೆ ಬಾಲಿವುಡ್’ಗೆ ದುಲ್ಕರ್ ಸಲ್ಮಾನ್! ಪ್ಯಾಡ್’ಮನ್ ಡೈರೆಕ್ಟರ್ ಜತೆ ಹೊಸ ಸಿನಿಮಾ

ಬೆಂಗಳೂರು, ಜನವರಿ 19, 2021 (www.justkannada.in): ದುಲ್ಕರ್ ಸಲ್ಮಾನ್ ಮತ್ತೆ ಬಾಲಿವುಡ್ ನತ್ತ ಮರಳಿ ಕಾಲಿಟ್ಟಿದ್ದಾರೆ.

ಮಲಯಾಳಂನಲ್ಲಿ ಮಾತ್ರವೇ ಅಲ್ಲದೆ, ತೆಲುಗು, ತಮಿಳಿನಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ದುಲ್ಕಾರ್ ಹಿಂದಿಯಲ್ಲೂ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದೀಗ ಹಿಂದಿಯ ಪ್ರತಿಭಾವಂತ ನಿರ್ದೇಶಕ ಆರ್.ಬಾಲ್ಕಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

ಚೀನಿ ಕಮ್, ಶಮಿತಾಬ್, ಪಾ, ಪ್ಯಾಡ್‌ಮ್ಯಾನ್’ನಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಆರ್.ಬಾಲ್ಕಿ, ಥ್ರಿಲ್ಲರ್ ಕತೆ ಬರೆದಿದ್ದು, ಚಿತ್ರಕ್ಕೆ ದುಲ್ಕರ್ ಆಯ್ಕೆ ಮಾಡಿಕೊಂಡಿದ್ದಾರೆ.