Sunday, August 9, 2026

BDA Apartments

Home Front Page ಸಿಎಂ ಆಗಿ ಸಿದ್ಧರಾಮಯ್ಯ ಮುಂದುವರಿಕೆ: ಯಾರೂ ಕಿಂಗ್ ಮೇಕರ್ ಆಗಲು ಸಾಧ್ಯವಿಲ್ಲ-ಸಚಿವ ಸತೀಶ್ ಜಾರಕಿಹೊಳಿ

ಸಿಎಂ ಆಗಿ ಸಿದ್ಧರಾಮಯ್ಯ ಮುಂದುವರಿಕೆ: ಯಾರೂ ಕಿಂಗ್ ಮೇಕರ್ ಆಗಲು ಸಾಧ್ಯವಿಲ್ಲ-ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಅಕ್ಟೋಬರ್,7,2024 (www.justkannada.in): ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ. ಸಿಎಂ ಆಗಿ ಸಿದ್ಧರಾಮಯ್ಯ ಮುಂದುವರೆಯಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಕಿಂಗ್ ಮೇಕರ್ ಆಗಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷಕ್ಕಾಗಿ ನಿಂತಿದ್ದೇನೆ. 12 ಗಂಟೆ ಟೈಮ್ ಸಮಯ ನೀಡುತ್ತಿದ್ದೇವೆ. ಅದಕ್ಕಾಗಿ ನಾವೆಲ್ಲ ಹೆದರುವ ಪರಿಸ್ಥಿತಿ ಇಲ್ಲ. ಕೆಲವರು ತೆರೆಮರೆಯಲ್ಲಿ ಕಾಂಗ್ರೆಸ್ ಗೆ ದುಡಿಯುತ್ತಾರೆ. ಕೆಲವರು ಹೈಲೈಟ್ ಆಗುತ್ತಾರೆ ಕೆಲವರು ಹೈಲೈಟ್ ಆಗಲ್ಲ.  ಏರ್ ಪೋರ್ಟ್ ರಸ್ತೆಯಲ್ಲಿ ಪೋಸ್ಟರ್ ಬ್ಯಾನರ್ ಹಾಕಿಸಿಕೊಳ್ಳುತ್ತಾರೆ.  ಅಂಥವರು ಹೈಲೈಟ್ ಆಗುತ್ತಾರೆ. ಹಳ್ಳಿಯಲ್ಲಿ ತಮ್ಮ ಹಣ ಖರ್ಚು ಮಾಡಿ ಪಕ್ಷಕ್ಕೆ ದುಡಿಯುವವರಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ.  ಪಾರ್ಟಿಯಲ್ಲಿ ಯಾರೂ ಕಿಂಗ ಮೇಕರ್ ಆಗಲು ಆಗಲ್ಲ ಎಂದರು.

ಸಚಿವ, ಡಿಸಿಎಂ, ಸಿಎಂ ಅನಂತರ ಕೇಂದ್ರ ಸಚಿವ ರಾಗಲು ಎಲ್ಲರಿಗೂ ಆಸೆ ಇರುತ್ತದೆ, ಮೊದಲು ಸಚಿವ, ಅಮೇಲೆ ಡಿಸಿಎಂ, ಬಳಿಕ ಸಿಎಂ, ಅನಂತರ ಕೇಂದ್ರ ಸಚಿವರಾಗಬೇಕು ಅಂತಾ ಆಸೆ ಇರುತ್ತದೆ. ಆದರೆ ಸದ್ಯಕ್ಕೆ ಸಿಎಂ ರೇಸ್ ಸನ್ನಿವೇಶ ಇಲ್ಲ. ಮುಡಾ ತನಿಖೆ ಆಗಬೇಕು. ಪಾರ್ಟಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರೊಬ್ಬರ ವೈಯುಕ್ತಿಕ ತೀರ್ಮಾನ ಅಲ್ಲ. ಯಾರೂ ಕಿಂಗ್ ಮೇಕರ್ ಆಗಲು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ. ಈಗ ರಾಜೀನಾಮೆ ಪ್ರಶ್ನೆ ಇಲ್ಲ ಎಂದರು.

Key words: Siddaramaiah,  continuation, as CM, Minister, Satish Jarakiholi