Wednesday, September 23, 2026

BDA Apartments

Home Cinema ಶೃತಿ ಹಾಸನ್’ಗೆ ಬರ್ತ್ ಡೇ ಗಿಫ್ಟ್! ‘ಸಲಾರ್’ ಟೀಂ ಸೇರಿದ ನಟಿ

ಶೃತಿ ಹಾಸನ್’ಗೆ ಬರ್ತ್ ಡೇ ಗಿಫ್ಟ್! ‘ಸಲಾರ್’ ಟೀಂ ಸೇರಿದ ನಟಿ

ಬೆಂಗಳೂರು, ಜನವರಿ 28, 2021 (www.justkannada.in): ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಲಿದ್ದಾರೆ.

ಸಲಾರ್ ತಂಡ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಘೋಷಿಸಿದೆ. ಅಂದಹಾಗೆ ಇಂದು ಶೃತಿ ಹಾಸನ್ ಜನ್ಮ ದಿನವೂ ಕೂಡ ಹೌದು. ಹೀಗಾಗಿ ಶೃತಿಗೆ ಡಬಲ್ ಗಿಫ್ಟ್ ಸಿಕ್ಕಿದೆ.

ಶ್ರುತಿಗೆ ಬರ್ತ್ ಡೇ ವಿಶ್ ಮಾಡಿರುವ ಪ್ರಭಾಸ್ ಸಲಾರ್ ನಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಕೆಜಿಎಫ್ ಮತ್ತು ಉಗ್ರಂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಡೈರೆಕ್ಟ್ ಮಾಡುತ್ತಿರುವ ಸಿನಿಮಾ ಸಲಾರ್. ಹೊಂಬಾಳೆ ಫಿಲ್ಸ್ ಕೂಡ ಶೃತಿ ಹಾಸನ್ ಅವರಿಗೆ ವಿಶ್ ಮಾಡಿದೆ.