Saturday, August 22, 2026

BDA Apartments

Home Front Page SIR ಅಕ್ರಮ: 35 ಬಿಎಲ್ ಒಗಳಿಗೆ ಶೋಕಾಸ್ ನೋಟಿಸ್ ಜಾರಿ

SIR ಅಕ್ರಮ: 35 ಬಿಎಲ್ ಒಗಳಿಗೆ ಶೋಕಾಸ್ ನೋಟಿಸ್ ಜಾರಿ

ಬೆಂಗಳೂರು,ಜುಲೈ,8,2026 (www.justkannada.in): ರಾಜ್ಯದಲ್ಲಿ ಎಸ್ ಐಆರ್ ನಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 35 ಬಿಎಲ್ ಒಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನವಣಾಧಿಕಾರಿ ಅನ್ಬುಕುಮಾರ್ ತಿಳಿಸಿದರು.

ಇಂದು ಮಾತನಾಡಿ ಮಾಹಿತಿ ನೀಡಿದ ಅನ್ಬುಕುಮಾರ್, ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಅಕ್ರಮ ಆರೋಪದ ಬಗ್ಗೆ ಕೆಲವು ದೂರು ಬಂದಿದೆ.  ಆ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ ಜಂಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪರಿಶೀಲಿಸುತ್ತಿದ್ದಾರೆ.    ಗುಂಪಾಗಿ ಒಂದೇ ಕಡೆ ಎಸ್ ಐಆರ್ ಪ್ರಕ್ರಿಯೆ ಮಾಡುವಂತಿಲ್ಲ ಮನೆ ಮನೆಗೆ ಹೋಗಿ ಫಾರಂ ವಿತರಿಸಬೇಕು. ಗುಂಪು ಗುಂಪಾಗಿ ಫಾರ್ ಹಂಚಿಕೆ ಬಗ್ಗೆ ದೂರು ಬಂದ ಹಿನ್ನೆಲೆ ಈವರೆಗೂ 35 ಹೆಚ್ಚು ಬಿಎಲ್ ಒಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ಸಾಮೂಹಿಕವಾಗಿ ಎಸ್ ಐಆರ್ ಅರ್ಜಿ ಕೊಟ್ಟ ಬಿಎಲ್ ಒಗಳಿಗೆ ನೋಟಿಸ್ ನೀಡಲಾಗಿದೆ.  ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ.  ಈವರೆಗೆ 4.4 ಕೋಟಿ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಿಸಿದ್ದೇವೆ. 14 ಜಿಲ್ಲೆಗಳ 124 ಕ್ಷೇತ್ತಗಳಲ್ಲಿ ಶೇ 90 ರಷ್ಟು ಎಸ್ ಐಆರ್ ಅರ್ಜಿ ವಿತರಿಸಿದ್ದೇವೆ  ಎಸ್ ಐಆರ್ ಅಕ್ರಮ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದರು.

Key words: SIR, illegality, Show cause notices, issued, 35 BLOs