Friday, October 9, 2026

BDA Apartments

Home Front Page ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆ.15ರವರೆಗೆ ಗಡುವು ವಿಸ್ತರಣೆ

ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆ.15ರವರೆಗೆ ಗಡುವು ವಿಸ್ತರಣೆ

ಮೈಸೂರು, ಜುಲೈ,8, 2026 (www.justkannada.in): ರಾಜ್ಯದಲ್ಲಿ ಶೇ.20ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ 2400 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಓಸಿ) ಇಲ್ಲದೆ ಶಾಶ್ವತ ವಿದ್ಯುತ್‌ ಸಂಪರ್ಕ ಪಡೆಯಲು ನೀಡಲಾಗಿದ್ದ ಗಡುವನ್ನು ಆಗಸ್ಟ್‌ 15ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು 2026ರ ಮೇ 31ರೊಳಗಾಗಿ ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಪ್ರಕರಣಗಳಿಗೆ ಸೀಮಿತವಾಗಿ ಸ್ವಾಧೀನಾನುಭವ ಪತ್ರ ಸಲ್ಲಿಕೆಗೆ ಒಂದು ಬಾರಿ ವಿನಾಯಿತಿ ಪಡೆದು ವಿದ್ಯುತ್ ಸಂಪರ್ಕ ಪಡೆಯಲು, ಜೂನ್ 22, 2026 ರಂದು 15 ದಿನಗಳ ಅವಧಿವರೆಗೆ ವಿಸ್ತರಿಸಿ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಸದರಿ ಗಡುವನ್ನು ಆಗಸ್ಟ್‌ 15ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರವು ಹೊಸ ಆದೇಶ ಹೊರಡಿಸಿದೆ.ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆ.15ರವರೆಗೆ ಗಡುವು ವಿಸ್ತರಣೆ cesc

ಈ ಹಿನ್ನೆಲೆಯಲ್ಲಿ 2400 ಚದರ ಅಡಿಗಳವರೆಗೆ ಅಳತೆಯ ನಿವೇಶನಗಳಲ್ಲಿ ಶೇ.20 ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ ನಿರ್ಮಿಸಿರುವ ಜಿ+3 ಅಂತಸ್ತಿನ ಕಟ್ಟಡಗಳು ಅಥವಾ ಸ್ಟಿಲ್ಟ್‌ ಪಾರ್ಕಿಂಗ್‌ +4 ಮಹಡಿ ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರವೇ ಈ ನಿಯಮ ಅನ್ವಯವಾಗುತ್ತದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಪ್ರಕಟಣೆಯಲ್ಲಿ ತಿಳಿಸಿದೆ ಹಾಗೂ ಗ್ರಾಹಕರು ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಸೆಸ್ಕ್‌ ಮನವಿ ಮಾಡಿದೆ.ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆ.15ರವರೆಗೆ ಗಡುವು ವಿಸ್ತರಣೆ jk02_new jk02 new

Key words: Deadline, extended, August 15, new, electricity, connections, CESC