Friday, October 9, 2026

BDA Apartments

Home Front Page  SIR  ಬಗ್ಗೆ ಕಾಂಗ್ರೆಸ್ ತದ್ವಿರುದ್ದ ನಿಲುವು, ಅಧಿಕಾರಿಗಳ ದುರುಪಯೋಗ- ಶಾಸಕ ವಿ.ಸುನೀಲ್ ಕುಮಾರ್

 SIR  ಬಗ್ಗೆ ಕಾಂಗ್ರೆಸ್ ತದ್ವಿರುದ್ದ ನಿಲುವು, ಅಧಿಕಾರಿಗಳ ದುರುಪಯೋಗ- ಶಾಸಕ ವಿ.ಸುನೀಲ್ ಕುಮಾರ್

ಬೆಂಗಳೂರು,ಜುಲೈ,8,2026 (www.justkannada.in): ಎಸ್ ಐ ಆರ್ ಬಗ್ಗೆ ಕಾಂಗ್ರೆಸ್ ತದ್ವಿರುದ್ದ ನಿಲುವು ತೆಗೆದುಕೊಂಡಿದೆ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಅಧಿಕಾರಿಗಳನ್ನ ಕಾಂಗ್ರೆಸ್ ದುರುಪಯೋಗಪಡಿಸಿಕೊಂಡಿದೆ. ಮತ್ತೊಂದು ಕಡೆ ಕಾಂಗ್ರೆಸ್ ಎಸ್ಐ ಆರ್ ವಿರೋಧಿಸುತ್ತಿದೆ.  ಕಾಂಗ್ರೆಸ್ ಗೆ ಚುನಾವಣಾ ಆಯೋಗ ಮತದಾರರ ಮೇಲೆ ವಿಶ್ವಾಸವಿಲ್ಲ. ಮತದಾರರ ಮೇಲೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ಹೇಳುಬಿಡಲಿ ಎಂದು ಹರಿಹಾಯ್ದರು.

ಗ್ಯಾರಂಟಿ ಬಗ್ಗೆ ಪಿಎಂಒ  ಆರ್ಥಿಕ ಸಲಹಾ ಸಮಿತಿ ಶ್ಲಾಘನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಸುನೀಲ್ ಕುಮಾರ್, ಈ ವಿಚಾರದ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾವು ಎಂದೂ ಗ್ಯಾರಂಟಿ ಯೋಜನೆ ವಿರೋಧ ಮಾಡಿಲ್ಲ ಎಂದರು.SIR ಬಗ್ಗೆ ಕಾಂಗ್ರೆಸ್ ತದ್ವಿರುದ್ದ ನಿಲುವು jk02_new jk02 new

Key words: Opposite stand, Congress, SIR,  MLA, V. Sunil Kumar